ಫ್ಲೋರಿಡಾ: ಭಾರತೀಯ ಮೂಲದ ಅಮೆರಿಕಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ 9 ತಿಂಗಳ ಬಾಹ್ಯಾಕಾಶ ಯಾತ್ರೆ ಬಳಿಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ. ಅವರು ಬಂದಿಳಿದ ಕ್ಷಣದ ವಿಡಿಯೋ ಇಲ್ಲಿದೆ.
ಈ ಮೂಲಕ 9 ತಿಂಗಳ ತ್ರಿಶಂಕು ಸ್ಥಿತಿ ಕೊನೆಗೂ ಮುಕ್ತಾಯವಾಗಿದೆ. ಇಂದು ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 3.27 ಕ್ಕೆ ಫ್ಲೋರಿಡಾ ಸಮುದ್ರದಲ್ಲಿ ಸುನಿತಾರನ್ನು ಹೊತ್ತಿದ್ದ ನೌಕೆ ಲ್ಯಾಂಡ್ ಆಗಿದೆ.
ಭೂಮಿಗೆ ಬಂದಿಳಿಯುತ್ತಿದ್ದಂತೇ ನಗು ನಗುತ್ತಾ ಕೈ ಬೀಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಒಟ್ಟು 17 ಗಂಟೆಗಳ ನಿರಂತರ ಪ್ರಯಾಣದ ಬಳಿಕ ಸುನಿತಾ ಭೂಮಿಗೆ ಬಂದಿಳಿದಿದ್ದಾರೆ. ಸುನಿತಾ ಜೊತೆ ಸಿಲುಕಿಕೊಂಡಿದ್ದ ಇನ್ನೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕೂಡಾ ಬಂದಿಳಿದಿದ್ದಾರೆ.