Select Your Language

Notifications

webdunia
webdunia
webdunia
webdunia

Sunita Williams: ಭೂಮಿಯತ್ತ ಪ್ರಯಾಣ ಶುರು ಮಾಡಿದ ಸುನಿತಾ ವಿಲಿಯಮ್ಸ್, ಬಂದಿಳಿಯುವುದು ಇಲ್ಲಿಗೆ

Sunita Williams

Krishnaveni K

ನ್ಯೂಯಾರ್ಕ್ , ಮಂಗಳವಾರ, 18 ಮಾರ್ಚ್ 2025 (11:49 IST)
Photo Credit: X
ನ್ಯೂಯಾರ್ಕ್: ನಾಸಾ ಬಾಹ್ಯಾಕಾಶ ಯಾತ್ರಿ, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಭೂಮಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಅವರು ಎಲ್ಲಿಗೆ ಬಂದಿಳಿಯುತ್ತಾರೆ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ.
 

ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿದ್ದ ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ ಇಂದು ಭೂಮಿಯತ್ತ ಯಶಸ್ವಿಯಾಗಿ ವಾಪಸಾಗುತ್ತಿದೆ. ಈ ಬಗ್ಗೆ ನಾಸಾ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಅಮೆರಿಕನ್ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 5.57 ಕ್ಕೆ ಮತ್ತು ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆ 4.27 ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರಲಿದ್ದಾರೆ.

ಸುನಿತಾ ಜೊತೆ ಅವರ ತಂಡದ ಸದಸ್ಯರಾದ ಬುಚ್ ವಿಲ್ ಮೋರ್, ನಿಕ್ ಹೇಗ್, ಅಲೆಕ್ಸಾಂಡರ್ ಗೊರ್ಬುನೊವ್ ಕೂಡಾ ಇದ್ದಾರೆ. ಹವಾಮಾನ ಪರಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಇಂದೇ ಅವರು ಮರಳಲು ವ್ಯವಸ್ಥೆ ಮಾಡಲಾಗಿದೆ.

ಸುನಿತಾ ವಿಲಿಯಮ್ಸ್ ಮತ್ತು ತಂಡ ನೇರವಾಗಿ ಫ್ಲೋರಿಡಾದ ಕರಾವಳಿಗೆ ಸ್ಪೇಸ್ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆ ಬಂದಿಳಿಯಬಹುದು ಎಂದು ನಾಸಾ ತಿಳಿಸಿದೆ. ಬಳಿಕ ಅವರು ಕೆಲವು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲ್ಲ. ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಟೆಕ್ಸಾಸ್ ನ ನಾಸಾದ ಜೋನ್ಸನ್ ಸ್ಪೇಸ್ ಸೆಂಟರ್ ಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ವೈದ್ಯಕೀಯ ನೆರವಿನ ಬಳಿಕ ಅವರು ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಬೆಲೆ ಹೇಗಿದೆ ನೋಡಿ