ನವದೆಹಲಿ: ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇಂದು 9 ತಿಂಗಳ ಬಳಿಕ ಭೂಮಿಗೆ ಮರಳುತ್ತಿದ್ದಾರೆ. ಭಾರತೀಯ ಮೂಲದ ಸುನಿತಾ ಭೂಮಿಗೆ ಬರುವ ಮೊದಲೇ ಪ್ರಧಾನಿ ಮೋದಿ ಬಿಗ್ ಆಫರ್ ನೀಡಿದ್ದಾರೆ.
ಸುನಿತಾ ವಿಲಿಯಮ್ಸ್ ಮತ್ತು ತಂಡವನ್ನು ನಾಸಾ ಇಂದು ಭೂಮಿಗೆ ಕರೆತರುತ್ತಿದೆ. ಈಗಾಗಲೇ ಅವರನ್ನು ಹೊತ್ತ ನೌಕೆ ಭೂಮಿಯತ್ತ ಸಂಚಾರ ಆರಂಭಿಸಿದೆ. ಭಾರತೀಯ ಕಾಲಮಾನ ಪ್ರಕಾರ ನಾಳೆ ಮುಂಜಾನೆ ವೇಳೆಗೆ ಸುನಿತಾ ಫ್ಲೋರಿಡಾ ಕರಾವಳಿ ಪ್ರದೇಶಕ್ಕೆ ಬಂದಿಳಿಯಲಿದ್ದಾರೆ.
ಸುನಿತಾ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿ ಯಶಸ್ವಿಯಾಗಿ ಭೂಮಿಯತ್ತ ಮರಳುತ್ತಿದ್ದಾರೆ. ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಭಾರತೀಯ ಮೂಲದ ಸುನಿತಾ ಅನುಭವ ಕತೆಯನ್ನು ಕೇಳಲು ಎಲ್ಲರೂ ಕಾದು ನಿಂತಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ, ಸುನಿತಾ ವಿಲಿಯಮ್ಸ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಸುನಿತಾ ಅಮೆರಿಕನ್ ಗಗನಯಾತ್ರಿಯಾಗಿದ್ದರೂ ಮೂಲತಃ ಭಾರತದ ಗುಜರಾತ್ ನವರು.