Select Your Language

Notifications

webdunia
webdunia
webdunia
webdunia

ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ?

ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ?
ವಾಷಿಂಗ್ಟನ್ , ಮಂಗಳವಾರ, 11 ಏಪ್ರಿಲ್ 2023 (10:54 IST)
ವಾಷಿಂಗ್ಟನ್ : ಭಾರತ ವಿಶ್ವದಲ್ಲಿಯೇ 2ನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಮಾತ್ರವಲ್ಲದೇ ಆ ಜನಸಂಖ್ಯೆ ಬೆಳೆಯುತ್ತಲೇ ಇದೆ. ಭಾರತದಲ್ಲಿ ಮುಸ್ಲಿಮರು ಪಾಶ್ಚಿಮಾತ್ಯರ ಗ್ರಹಿಕೆಗಿಂತ ಚೆನ್ನಾಗಿಯೇ ಇದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
 
ಸೋಮವಾರ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದಲ್ಲಿ ಮುಸ್ಲಿಮರ ಬಗೆಗಿನ ಪಾಶ್ಚಿಮಾತ್ಯ ರಾಷ್ಟ್ರಗಳ ಗ್ರಹಿಕೆಯನ್ನು ಅಲ್ಲಗಳೆದಿರುವ ಸೀತಾರಾಮನ್, ಒಂದು ವೇಳೆ ವಾಸ್ತವದಲ್ಲಿ ಈ ಗ್ರಹಿಕೆ ನಿಜವಾಗಿದ್ದರೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಏಕೆ ಏರಿಕೆಯಾಗುತ್ತಿತ್ತು? ಈಗಲೂ 1947 ರಲ್ಲಿ ಇದ್ದ ಜನಸಂಖ್ಯೆಯಂತೆಯೇ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಅತ್ತ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹದಗೆಡುತ್ತಿದೆ. ಅವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇದೆ. ಅವರ ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡ ಅಪರಾಧಗಳಂತೆ ಬಿಂಬಿಸಿ ಮರಣದಂಡನೆಯಂತಹ ಶಿಕ್ಷೆಗೆ ಒಳಪಡಿಸುತ್ತಾರೆ. ಧರ್ಮನಿಂದನೆಯ ಕಾನೂನುಗಳು ಹೆಚ್ಚಿನ ಸಂದರ್ಭದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಬಳಸಲಾಗುತ್ತಿದೆ. ಸರಿಯಾಗಿ ತನಿಖೆ ನಡೆಸದೇ ಬಲಿಪಶುಗಳನ್ನು ತಪ್ಪಿತಸ್ಥರೆಂದು ಭಾವಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ : ಕುಮಾರಸ್ವಾಮಿ