Publish Date: Wed, 12 Apr 2023 (09:41 IST)
Updated Date: Wed, 12 Apr 2023 (10:14 IST)
ಕೊಪ್ಪಳ : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ. ಜೆಡಿಎಸ್ ಸ್ಪಷ್ಟ ಬಹುಮತದ ಸರ್ಕಾರ ಸ್ಥಾಪನೆ ಆಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದರುವ ಹೆಚ್ಡಿಕೆ, ರಾಜ್ಯದಲ್ಲಿ 123 ಸ್ಥಾನ ಗೆಲ್ಲಲು ಕೆಲಸ ಮಾಡುತ್ತಿದ್ದೇವೆ. ವಾತಾವರಣ ಸಹ ಅದೇ ರೀತಿಯಾಗಿದೆ ಎಂದು ತಿಳಿಸಿದ್ದಾರೆ.
ಕರಡಿ ಸಂಗಣ್ಣ ಜೆಡಿಎಸ್ನಿಂದ ಸ್ಪರ್ಧಿಸುವ ಕುರಿತು ಮಾತನಾಡಿ, ಕರಡಿ ಸಂಗಣ್ಣ ನನ್ನ ಜೊತೆಗೆ ಮಾತನಾಡಿಲ್ಲ. ಸಮಯ ಬಂದಾಗ, ದೇವರು ಯಾರ್ಯಾರಿಗೆ ಏನೇನು ಆಟ ಆಡಿಸುತ್ತಾನೋ ನೋಡೋಣ ಎಂದು ಕರಡಿ ಸಂಗಣ್ಣ ಜೆಡಿಎಸ್ಗೆ ಬರಬಹುದೆಂದು ಪರೋಕ್ಷವಾಗಿ ನುಡಿದಿದ್ದಾರೆ.
ಗಂಗಾವತಿಯಲ್ಲಿ ಜನಾರ್ದನರೆಡ್ಡಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ತೀರ್ಮಾನ. ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಅವರ ಬಗ್ಗೆ ನಾವು ಸಣ್ಣದಾಗಿ, ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.