ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್ ಮಿಲಿಟರಿ ಮತ್ತೊಮ್ಮೆ ಜನರಿಗೆ ಸೂಕ್ತ ಆಡಳಿತ ಒದಗಿಸದೆ ಯುದ್ಧದ ನಡವಳಿಕೆಯಿಂದ ನಾಗರಿಕರನ್ನು ನಿರ್ಲಕ್ಷಿಸಿದೆ ಎಂದು ಟರ್ಕ್ ಆರೋಪಿಸಿದೆ.
ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್ ಪ್ರತಿಕ್ರಿಯಿಸಿ, ಹಿಂಸಾತ್ಮಕ ದಾಳಿಗಳ ಆಡಳಿತವು ಮಾನವ ಜೀವನವನ್ನು ಕಡೆಗಣಿಸುತ್ತದೆ. ಅಂತಹ ಆಡಳಿತವನ್ನು ಬಲವಾಗಿ ಖಂಡಿಸುತ್ತೇವೆ. ಫೆಬ್ರವರಿ 2021ರ ದಂಗೆಯ ನಂತರ ಮ್ಯಾನ್ಮಾರ್ ಭೀಕರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಮ್ಯಾನ್ಮಾರ್ಗೆ ಮಾನವೀಯ ಜವಾಬ್ದಾರಿಯ ಸರ್ಕಾರ ಬೇಕಿದೆ. ಭೀಕರ ಹಿಂಸಾಚಾರವನ್ನು ನಿಲ್ಲಿಸಿ ಜನರ ಅಂತರ್ಗತ ಪ್ರಜಾಪ್ರಭುತ್ವದ ಆಕಾಂಕ್ಷೆಗಳನ್ನು ಗೌರವಿಸಲು ಅಮೆರಿಕ, ಮ್ಯಾನ್ಮಾರ್ ಆಡಳಿತಕ್ಕೆ ಕರೆ ನೀಡುತ್ತದೆ ಎಂದಿದ್ದಾರೆ.