Publish Date: Wed, 12 Apr 2023 (07:45 IST)
Updated Date: Wed, 12 Apr 2023 (09:47 IST)
ನೇಪ್ಯಿಡಾವ್ : ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ ಮಂಗಳವಾರ ಮಧ್ಯ ಮ್ಯಾನ್ಮಾರ್ನಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾಳಿಯನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.ಫೆ.2021ರ ದಂಗೆಯಲ್ಲಿ ಮಿಲಿಟರಿ ಅಧಿಕಾರ ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್ ಅವ್ಯವಸ್ಥೆಯಲ್ಲಿದೆ ಮತ್ತು ಅದರ ಆರ್ಥಿಕತೆ ಹದಗೆಟ್ಟಿದೆ. ಇದನ್ನು ವಿರೋಧಿಸಿ ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.