Select Your Language

Notifications

webdunia
webdunia
webdunia
webdunia

ಜೈಲಿನ ಮೇಲೆ ಗುಂಡಿನ ದಾಳಿ ! 24 ಕೈದಿಗಳು ಎಸ್ಕೇಪ್‌

ಜೈಲಿನ ಮೇಲೆ ಗುಂಡಿನ ದಾಳಿ ! 24 ಕೈದಿಗಳು ಎಸ್ಕೇಪ್‌
ಮೆಕ್ಸಿಕೊ , ಸೋಮವಾರ, 2 ಜನವರಿ 2023 (13:49 IST)
ಮೆಕ್ಸಿಕೊ : ಇಲ್ಲಿನ ಸಿಯುಡಾಡ್ ಜುವಾರೆಜ್ನಲ್ಲಿ ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, 10 ಭದ್ರತಾ ಸಿಬ್ಬಂದಿ ಮತ್ತು 4 ಮಂದಿ ಕೈದಿಗಳು ಮೃತಪಟ್ಟಿದ್ದಾರೆ.

ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್ಗೆ ವಾಹನಗಳಲ್ಲಿ ಬಂದಿದ್ದಾರೆ.

ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಸನ್ನಿವೇಶದಲ್ಲಿ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ