Select Your Language

Notifications

webdunia
webdunia
webdunia
webdunia

ಗುಂಡಿನ ದಾಳಿಗೆ ಮೂವರು ಗನ್‍ಮ್ಯಾನ್‍ಗಳು ಬಲಿ

ಗುಂಡಿನ ದಾಳಿಗೆ ಮೂವರು ಗನ್‍ಮ್ಯಾನ್‍ಗಳು ಬಲಿ
ಕಾಬೂಲ್ , ಮಂಗಳವಾರ, 13 ಡಿಸೆಂಬರ್ 2022 (11:21 IST)
ಕಾಬೂಲ್ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಚೀನೀಯರ ವಸತಿ ಗೃಹದ ಮೇಲೆ ದಾಳಿ ನಡೆಸಿ ಮೂವರು ಗನ್ಮ್ಯಾನ್ಗಳನ್ನು ದಾಳಿಕೋರರು ಬಲಿ ಪಡೆದಿದ್ದಾರೆ. ಈ ಘಟನೆಯ ಬಳಿಕ ದಾಳಿಯ ಹೊಣೆಯನ್ನು ಐಎಸ್ಎಸ್  ಹೊತ್ತುಕೊಂಡಿದೆ.

ಕಾಬೂಲ್ನ ಶಹರ್-ಇ ನಾವ್ ಪ್ರದೇಶದಲ್ಲಿ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಿನ್ನೆ ನಡೆದಿತ್ತು.
ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚೀನಾದ ವ್ಯಾಪಾರಸ್ಥರು ಕಾಬೂಲ್ನ ಜನಪ್ರಿಯ ಲಾಂಹನ್ ಹೋಟೆಲ್ಗೆ ತೆರಳುತ್ತಾರೆ.

ಹಾಗಾಗಿ ಹೋಟೆಲ್ಗೆ ದಾಳಿಕೋರರು ನುಗ್ಗಿ ಗುಂಡಿನ ಮಳೆ ಸುರಿಸಿದ್ದರು. ಶಸ್ತ್ರಾಸ್ತ್ರಗಳನ್ನು ಬ್ಯಾಗ್ನಲ್ಲಿ ತುಂಬಿ ಹೋಟೆಲ್ ಪ್ರವೇಶಿಸಿದ ದಾಳಿಕೋರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿ ಮೂವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ. 

ದಾಳಿ ನಡೆಯುತ್ತಿದ್ದಂತೆ ಹೋಟೆಲ್ನ ಬಾಲ್ಕನಿಯಿಂದ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರು ವಿದೇಶಿಗರು ಗಾಯಗೊಂಡಿದ್ದಾರೆ. ಶಾಹರ್-ಎ-ನಾವ್ ಪ್ರದೇಶದಲ್ಲಿ ದಾಳಿಗೊಳಗಾದ ಹೋಟೆಲ್ ಬಳಿ ಇರುವ ಸ್ಥಳೀಯ ಆಸ್ಪತ್ರೆಗೆ 20ಕ್ಕೂ ಹೆಚ್ಚು ಮಂದಿ ಗಾಯಳುಗಳನ್ನು ದಾಖಲಿಸಲಾಗಿದ್ದು, 3 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

2,000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿ : ಸುಶೀಲ್