Select Your Language

Notifications

webdunia
webdunia
webdunia
webdunia

ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ!

ಚೀನೀಯರ ಅತಿಥಿ ಗೃಹದ ಬಳಿ ಭಾರೀ ಸ್ಫೋಟ, ಗುಂಡಿನ ದಾಳಿ!
ನವದೆಹಲಿ , ಮಂಗಳವಾರ, 13 ಡಿಸೆಂಬರ್ 2022 (09:02 IST)
ಕಾಬೂಲ್ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಚೀನೀಯರ ವಸತಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಕಾಬೂಲ್ನ ಶಹರ್-ಇ ನಾವ್ ಪ್ರದೇಶದಲ್ಲಿ ಚೀನಾದ ಅತಿಥಿ ಗೃಹದ ಬಳಿ ಭಾರೀ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಆದರೆ ಭದ್ರತಾ ಅಧಿಕಾರಿಗಳು ಈ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ವರದಿಗಳ ಪ್ರಕಾರ ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಚೀನಾದ ವ್ಯಾಪಾರಸ್ಥರು ಕಾಬೂಲ್ನ ಜನಪ್ರಿಯ ಲಾಂಹನ್ ಹೋಟೆಲ್ಗೆ ತೆರಳುತ್ತಾರೆ. ಇಂದು ಹೋಟೆಲ್ಗೆ ಹಲವು ದಾಳಿಕೋರರು ನುಗ್ಗಿದ್ದು, ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ