Publish Date: Sun, 27 Nov 2022 (07:33 IST)
Updated Date: Sun, 27 Nov 2022 (09:36 IST)
ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮಹಮ್ಮದ್ ಶಾರೀಕ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ.
ಇದೀಗ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ವಿಷಯ ಬಯಲಾಗ್ತಿದೆ. ಮಂಗಳೂರಿಗೆ ಬಾಂಬ್ ಜೊತೆಗೆ ಬಂದಿದ್ದು ಕೇವಲ ಶಾರೀಕ್ ಮಾತ್ರ ಅಲ್ಲ. ಮತ್ತೊಬ್ಬ ವ್ಯಕ್ತಿ ಇದ್ದ ಅನ್ನುವ ಆತಂಕಕಾರಿ ಮಾಹಿತಿಯೂ ಬಯಲಾಗಿದೆ.
ಹೌದು.. ನವೆಂಬರ್ 19ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಗೂ ಮುನ್ನ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಶಾರೀಕ್ ಜೊತೆಗೆ ಇನ್ನಿಬ್ಬರು ಇದ್ದರು ಎನ್ನುವ ವಿಚಾರ ಬಯಲಾಗಿದೆ.