Select Your Language

Notifications

webdunia
webdunia
webdunia
webdunia

ನಕಲಿ ಟೆಲಿಗ್ರಾಮ್ ಖಾತೆ ಯಲ್ಲಿ ಸುಳ್ಳು ಮಾಹಿತಿ ಹಂಚಿಕೆ

ನಕಲಿ ಟೆಲಿಗ್ರಾಮ್ ಖಾತೆ ಯಲ್ಲಿ ಸುಳ್ಳು ಮಾಹಿತಿ ಹಂಚಿಕೆ
ಕೀವ್ , ಗುರುವಾರ, 10 ಮಾರ್ಚ್ 2022 (13:36 IST)
ಕೀವ್ : ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭೀಕರ ಯುದ್ಧ, ರಕ್ತಪಾತದ ನಡುವೆಯೂ ಯಾವೊಬ್ಬ ದೇಶವೂ ಶರಣಾಗುವ ಹಂತಕ್ಕೆ ಬಂದಿಲ್ಲ.

ಆದರೆ ಉಕ್ರೇನ್ ಅಧ್ಯಕ್ಷನ ನಕಲಿ ಟೆಲಿಗ್ರಾಮ್ ಖಾತೆ ಸೈನಿಕರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.  ಉಕ್ರೇನ್ ಅಧ್ಯಕ್ಷನ ಟೆಲಿಗ್ರಾಮ್ ಖಾತೆಯಂತೆಯೇ ಹೋಲುವ ನಕಲಿ ಖಾತೆಯೊಂದರಲ್ಲಿ ಉಕ್ರೇನ್ ಯೋಧರಿಗೆ ಶರಣಾಗುವಂತೆ ಸಂದೇಶ ನೀಡಲಾಗಿತ್ತು. ಈ ಸಂದೇಶ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ಸೈನಿಕರಲ್ಲಿ ಗೊಂದಲ ಏರ್ಪಟ್ಟಿತು.

ಈ ಮಾಹಿತಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಎಚ್ಚೆತ್ತು, ಇದು ತಪ್ಪು ಮಾಹಿತಿ ಎಂದು ತನ್ನ ಪ್ರಜೆಗಳಿಗೆ ತಿಳಿಸಿದ್ದಾರೆ. ಬಳಿಕ ಝೆಲೆನ್ಸ್ಕಿ ಹೆಸರಿನಲ್ಲಿದ್ದ ನಕಲಿ ಖಾತೆಯನ್ನು ಬ್ಯಾನ್ ಮಾಡಲಾಗಿದೆ. 

ವರದಿಗಳ ಪ್ರಕಾರ ಝೆಲೆನ್ಸ್ಕಿಯ ನಕಲಿ ಟೆಲಿಗ್ರಾಮ್ ಖಾತೆಯನ್ನು ತೆಗೆದು ಹಾಕುವುದಕ್ಕೂ ಮೊದಲು ಸುಮಾರು 20,000 ಅನುಯಾಯಿಗಳು ಇದ್ದರು ಎಂದು ವರದಿಗಳು ತಿಳಿಸಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು