Select Your Language

Notifications

webdunia
webdunia
webdunia
webdunia

ಯೂರೋಪ್ ನಾಯಕರಿಗೆ ಝೆಲೆನ್ಸ್ಕಿ ಕರೆ ಏನು?

ಯೂರೋಪ್ ನಾಯಕರಿಗೆ ಝೆಲೆನ್ಸ್ಕಿ ಕರೆ ಏನು?
ನವದೆಹಲಿ , ಬುಧವಾರ, 2 ಮಾರ್ಚ್ 2022 (08:06 IST)
ಕೀವ್ : ನೀವು ನಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ,

ಕತ್ತಲಿನ ವಿರುದ್ಧ ಬೆಳಕು ಜಯ ಸಾಧಿಸುತ್ತೆ ಎಂದು ಯೂರೋಪ್ ರಾಷ್ಟ್ರಗಳ ನಾಯಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾವಾವೇಷದಲ್ಲಿ ಕರೆ ನೀಡಿದ್ದಾರೆ.

ಯೂರೋಪ್ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ನೆಲಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಮ್ಮ ದೇಶದ ಎಲ್ಲಾ ದೊಡ್ಡ ನಗರಗಳನ್ನು ಈಗ ನಿರ್ಬಂಧಿಸಲಾಗಿದೆ. ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ.

ನಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ನೀವು ಸಾಬೀತುಪಡಿಸಿ. ನೀವು ನಿಜವಾಗಿಯೂ ಯುರೋಪಿಯನ್ನರು ಎಂದು ತೋರಿಸಿ. ಜೀವನವು ಸಾವಿನ ವಿರುದ್ಧ ಹಾಗೂ ಬೆಳಕು ಕತ್ತಲೆಯ ವಿರುದ್ಧ ಗೆಲ್ಲುತ್ತದೆ ಎಂದು ಭಾವುಕವಾಗಿ ನುಡಿದಿದ್ದಾರೆ. 

ಇಂದು ನಾವು ನಿಮ್ಮೆಲ್ಲರನ್ನೂ, ಯೂರೋಪಿಯನ್ ಒಕ್ಕೂಟದ ದೇಶಗಳನ್ನು ಒಗ್ಗೂಡಿಸಿದ್ದೇವೆ. ಇದು ನನಗೆ ಖುಷಿಯ ವಿಚಾರ. ಆದರೆ ಇದಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ತೆರಬೇಕು ಎಂದು ನನಗೆ ತಿಳಿದಿರಲಿಲ್ಲ. ರಷ್ಯಾ ಆಕ್ರಮಣ ನನಗೆ, ಪ್ರತಿಯೊಬ್ಬ ಉಕ್ರೇನಿಯನ್ನರಿಗೆ ಮತ್ತು ದೇಶಕ್ಕೆ ದೊಡ್ಡ ದುರಂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯರ ಸ್ಥಳಾಂತರಕ್ಕೆ ವಾಯುಪಡೆ ಸಿದ್ಧ