Select Your Language

Notifications

webdunia
webdunia
webdunia
webdunia

ಚಂದಮಾಮನ ವಯಸ್ಸೆಷ್ಟು? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ!

ಚಂದಮಾಮನ ವಯಸ್ಸೆಷ್ಟು? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ ನೋಡಿ!
ನವದೆಹಲಿ , ಬುಧವಾರ, 25 ಅಕ್ಟೋಬರ್ 2023 (20:28 IST)
ನವದೆಹಲಿ: ಪ್ರತಿನಿತ್ಯ ಆಕಾಶದಲ್ಲಿ ಸುಂದರವಾಗಿ ಕಾಣುವ ಚಂದಮಾಮ ಯಾರಿಗೆ ಇಷ್ಟವಿಲ್ಲ ಹೇಳಿ? ಚಂದ್ರ ನಮಗೆ ನಮ್ಮ ಮನೆಯ ಸದಸ್ಯನಂತೇ ಪ್ರಿಯನಾಗಿದ್ದಾನೆ.

ಚಿಕ್ಕಮಕ್ಕಳಿಗಂತೂ ಚಂದಮಾಮನನ್ನು ತೋರಿಸಿ ಎಷ್ಟು ಬಾರಿಸಿ ನಗಿಸಿಲ್ಲ ಹೇಳಿ? ಹಾಗಿದ್ದರೆ ನಾವು-ನೀವು ಇಷ್ಟಪಡುವ ಚಂದಮಾಮನ ನಿಜ ವಯಸ್ಸೆಷ್ಟು ಎಂದು ನಿಮಗೆ ಗೊತ್ತಾ?

ಭೂಮಿ ಸೃಷ್ಟಿಯಾಗಿ 465 ಕೋಟಿ ವರ್ಷಗಳಾಗಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಿದ್ದರೆ ಚಂದ್ರ ಹುಟ್ಟಿ ಎಷ್ಟು ವರ್ಷಗಳಾಗಿವೆ ಎಂಬುದಕ್ಕೆ ವಿಜ್ಞಾನಿಗಳು ಈಗ ಉತ್ತರ ಕಂಡುಕೊಂಡಿದ್ದಾರೆ. ಹೊಸ ವಿಶ್ಲೇಷಣೆಗಳ ಪ್ರಕಾರ ಚಂದ್ರನಿಗೆ 446 ಕೋಟಿ ವರ್ಷಗಳಾಗಿವೆ. ‘ಜಿಯೋಕೆಮಿಕಲ್ ಪಸ್ಪೆಕ್ಟಿವ್ಸ್ ಲೆಟರ್ಸ್’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಈ ವಿಚಾರವನ್ನು ಬರೆಯಲಾಗಿದೆ.

400 ಕೋಟಿ ವರ್ಷಗಳ ಹಿಂದೆ ಭೂಮಿಗೆ ಮಂಗಳ ಗ್ರಹದ ಗಾತ್ರದ ಕಾಯವೊಂದು ಅಪ್ಪಳಿಸಿದಾಗ ಹೊರಹಾರಿದ ತುಂಡು ಚಂದ್ರನಾಗಿ ರೂಪುಗೊಂಡಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಡಿಕೆಶಿವಕುಮಾರ್ ಗೆ ತಿರುಗೇಟು ನೀಡಿದ ಸಿಪಿ ಯೋಗೇಶ್ವರ್