Publish Date: Tue, 17 Oct 2023 (17:33 IST)
Updated Date: Tue, 17 Oct 2023 (19:36 IST)
ಬೆಂಗಳೂರಿನಲ್ಲಿ ವಿದೇಶಿ ಸಿಗರೇಟ್ಗಳನ್ನ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.. ಅಕ್ರಮವಾಗಿ ದಾಸ್ತಾನು ಮಾಡಿದ ಸುಮಾರು 22 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ ಮಾಡಿದ್ದಾರೆ. ಸಿಟಿ ಮಾರ್ಕೆಟ್ ಬಳಿಯ ಗೋಡೌನ್ ನಲ್ಲಿ ದಾಸ್ತಾನು ಮಾಡಿದ್ದ ಆರೋಪಿ ದೆಹಲಿಯಿಂದ ಕೊರಿಯರ್ ಮೂಲಕ ಸಿಗರೇಟ್ ತರಿಸಿದ್ದ ಎಂದು ತಿಳಿದು ಬಂದಿದೆ.. ಆರೋಪಿಯಿಂದ 1,500 ಬಾಕ್ಸ್ ವಿವಿಧ ಮಾದರಿಯ ವಿದೇಶಿ ಸಿಗರೇಟ್ ಜಪ್ತಿ ಮಾಡಲಾಗಿದ್ದು, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ