Publish Date: Fri, 09 Sep 2022 (10:59 IST)
Updated Date: Fri, 09 Sep 2022 (10:50 IST)
ಲಂಡನ್ : ಬ್ರಿಟನ್ ರಾಣಿ ಎಲಿಜಬೆತ್-2 ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂದು ರಾತ್ರಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1923ರಿಂದ ಬ್ರಿಟನ್ನ ರಾಣಿಯಾಗಿದ್ದರು.
ವೈದ್ಯರ ಸಲಹೆಯಂತೆ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇಡಲಾಗಿತ್ತು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಲಾಗಿತ್ತು.
ಬಾಲ್ಮೋರಲ್ ಕ್ಯಾಸಲ್ನಲ್ಲಿ ಉಳಿದಿದ್ದ ರಾಣಿ ಎಲಿಜಬೆತ್ರನ್ನು ನೋಡಲು, ಆರೋಗ್ಯ ವಿಚಾರಿಸಲು ಇಂದು ಬೆಳಗ್ಗೆಯಿಂದಲೇ ಸಂಬಂಧಿಕರು ದೌಡಾಯಿಸುತ್ತಿದ್ದರು. ಇದೀಗ ನಿಧನ ಹೊಂದಿದ್ದಾರೆ.