Select Your Language

Notifications

webdunia
webdunia
webdunia
webdunia

ಬ್ರಿಟನ್‌ನಲ್ಲಿ ಅತಿ ದೊಡ್ಡ ರೈಲು ಮುಷ್ಕರ!

ಬ್ರಿಟನ್‌ನಲ್ಲಿ ಅತಿ ದೊಡ್ಡ ರೈಲು ಮುಷ್ಕರ!
ಲಂಡನ್ , ಬುಧವಾರ, 22 ಜೂನ್ 2022 (10:45 IST)
ಲಂಡನ್ : 30 ವರ್ಷಗಳಲ್ಲೇ ಕಂಡಿರದ ಅತ್ಯಂತ ದೊಡ್ಡ ರೈಲು ಮುಷ್ಕರ ಮಂಗಳವಾರ ಬ್ರಿಟನ್ನಲ್ಲಿ ಪ್ರಾರಂಭವಾಗಿದೆ.

ಬ್ರಿಟನ್ ಆರ್ಥಿಕತೆಯಲ್ಲಿ ವ್ಯಾಪಕವಾದ ಕೈಗಾರಿಕಾ ಕ್ರಮದಿಂದ ವೇತನ ಹಾಗೂ ಉದ್ಯೋಗಿಗಳ ವಿವಾದದಿಂದ 10 ಸಾವಿರ ಸಿಬ್ಬಂದಿ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಬ್ರಿಟನ್ನಲ್ಲಿ ಬೃಹತ್ ಮುಷ್ಕರ ನಡೆಯುತ್ತಿದ್ದು, ಸ್ತಬ್ಧವಾದಂತೆ ತೋರುತ್ತಿದೆ.

ಮಂಗಳವಾರದ ಮುಷ್ಕರದಿಂದಾಗಿ 40 ಸಾವಿರಕ್ಕೂ ಅಧಿಕ ರೈಲು ಕಾರ್ಮಿಕರು ಸ್ಟೇಷನ್ಗಳಲ್ಲಿ ಸಾಲುಗಟ್ಟಿದ್ದಾರೆ. ಇದರಿಂದ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ. ಪ್ರತ್ಯೇಕ ಮುಷ್ಕರದಿಂದ ಲಂಡನ್ನ ಅಂಡರ್ಗ್ರೌಂಡ್ ಮೆಟ್ರೋ ಸಂಚಾರ ಕೂಡಾ ಹೆಚ್ಚಾಗಿ ಮುಚ್ಚಲ್ಪಟ್ಟಿದೆ.

ಕೋವಿಡ್ನಿಂದ ತತ್ತರಿಸಿ ಹೋಗಿರುವ ಸಂದರ್ಭ ಬ್ರಿಟಿಷ್ ಕುಟುಂಬಗಳಿಗೆ ಸಹಾಯದ ಅಗತ್ಯವಿದೆ. ಬದಲಿಗೆ ಕೈಗಾರಿಕಾ ಕ್ರಮ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಘಾಸಿಗೊಳಿಸಬಹುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಭಾರೀ ಮಳೆ! 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್