Select Your Language

Notifications

webdunia
webdunia
webdunia
webdunia

ನಿಯಮ ಪಾಲನೆ ಮಾಡಿದ್ರೆ ಮಾತ್ರ ಶಾಲೆಗಳು ಅಧಿಕೃತ

ನಿಯಮ ಪಾಲನೆ ಮಾಡಿದ್ರೆ ಮಾತ್ರ ಶಾಲೆಗಳು ಅಧಿಕೃತ
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2022 (10:45 IST)
ಬೆಂಗಳೂರು : ರಾಜ್ಯದಲ್ಲಿ ಇನ್ಮುಂದೆ ಅನಧಿಕೃತ ಖಾಸಗಿ ಶಾಲೆಗಳಿಗೆ  ಬ್ರೇಕ್ ಬೀಳೋದು ಖಚಿತವಾಗಿದೆ.

ಶಿಕ್ಷಣ ಇಲಾಖೆಯಲ್ಲೂ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರ್ಕಾರ ಅನಧಿಕೃತ ಶಾಲೆಗಳ ಮೇಲೆ ಪ್ರಹಾರ ನಡೆಸಿದೆ. ಅನಧಿಕೃತ ಖಾಸಗಿ ಶಾಲೆಗಳ ತೆರವಿಗಾಗಿ ಆಪರೇಷನ್ ಕ್ಲೀನ್ ಅಭಿಯಾನ ಪಾರ್ಟ್-2 ಶುರು ಮಾಡಿದೆ.

ಇತ್ತೀಚೆಗಷ್ಟೇ ಅನಧಿಕೃತ ಖಾಸಗಿ ಶಾಲೆಗಳನ್ನು ಪಟ್ಟಿ ಮಾಡಲು ಅಭಿಯಾನ ಶುರು ಮಾಡಿತ್ತು. ಇದೀಗ ಶಿಕ್ಷಣ ಇಲಾಖೆ ರಿಲೀಸ್ ಮಾಡಿರೋ ಮಾನದಂಡಗಳು ಇದ್ರೆ ಮಾತ್ರ ಆ ಶಾಲೆಗಳು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಸರ್ಕಾರದ ನಿಯಮ ಪಾಲನೆ ಮಾಡದೇ ಇರೋ ಶಾಲೆಗಳಿಗೆ ಬೀಗ ಬಿಳೋದು ಖಚಿತವಾಗಿದೆ.

ಯಾವ ಶಾಲೆಗಳು ಅನಧಿಕೃತ ಆಗುತ್ತವೆ?

•             ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 30, 31 ಅಡಿ ನೋಂದಣಿ ಪಡೆಯದ ಶಾಲೆಗಳು
•             ಶಾಲಾ ಮಾನ್ಯತೆಯನ್ನು 1 ವರ್ಷಕ್ಕಿಂತ ಹೆಚ್ಚು ನವೀಕರಣ ಮಾಡದಿರುವುದು
•             ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು
•             ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಮಾಡಿದ ಶಾಲೆಗಳು
•             ಅನಧಿಕೃತವಾಗಿ ಬೇರೆಯವರಿಗೆ ಹಸ್ತಾಂತರ ಮಾಡಿದ ಶಾಲೆಗಳು
•             ಇಲಾಖೆಯಿಂದ ನೋಂದಣಿ ಪಡೆಯದ ಉಪಶಾಲೆಗಳು
•             ಹೆಚ್ಚುವರಿ ತರಗತಿಯನ್ನು ಅನುಮತಿ ಪಡೆಯದೇ ಪ್ರಾರಂಭಿಸಿರುವ ಶಾಲೆಗಳು
•             ಅನುಮತಿ ಪಡೆದ ನಂತರ ಮತ್ತೊಂದು ಮಾಧ್ಯಮದಲ್ಲಿ ಪಠ್ಯ ಬೋಧನೆ ಮಾಡುವುದು
•             ಸರ್ಕಾರ ಅನುಮತಿ ನೀಡಿದ ಪಠ್ಯಕ್ರಮ ಬದಲಾಗಿ ಬೇರೆ ಪಠ್ಯ ಬೋಧನೆ ಮಾಡುವ ಶಾಲೆಗಳು
•             ಶಾಲೆ ಸ್ಥಾಪನೆಗೆ ಅನುಮತಿ ಕೊಟ್ಟ ಜಾಗದಿಂದ ಅನುಮತಿ ಪಡೆಯದೇ ಸ್ಥಳಾಂತರ ಮಾಡಿದ ಶಾಲೆಗಳು
•             ಅನುಮತಿ ಪಡೆಯದೇ ಬೇರೊಂದು ಆಡಳಿತ ಮಂಡಳಿ ನಡೆಸುವುದು
•             ಬೇರೆ ಪಠ್ಯಕ್ರಮದ ಅನುಮತಿ ಪಡೆದ ಬಳಿಕವೂ ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಶಾಲೆಗಳು


Share this Story:

Follow Webdunia kannada

ಮುಂದಿನ ಸುದ್ದಿ

ಭವಿಷ್ಯದ ಭಾರತ ನಿಮಗೆ ಇಲ್ಲಿ ಕಾಣುತ್ತದೆ : ಮೋದಿ