Select Your Language

Notifications

webdunia
webdunia
webdunia
webdunia

ಶಿಕ್ಷಣ ಇಲಾಖೆಯ ವಿರುದ್ಧ ಗರಂ ಆದ ಖಾಸಗಿ ಶಾಲೆಗಳು

ಶಿಕ್ಷಣ ಇಲಾಖೆಯ ವಿರುದ್ಧ ಗರಂ ಆದ ಖಾಸಗಿ ಶಾಲೆಗಳು
bangalore , ಶುಕ್ರವಾರ, 26 ಆಗಸ್ಟ್ 2022 (15:16 IST)
ಖಾಸಗಿ ಶಾಲಾ ಒಕ್ಕೂಟದಿಂದ  ಬಿಇಒ, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಗಳ ಪರ್ಸಂಟೇಜ್ ಆರೋಪ ವಿಚಾರವಾಗಿ ಖಾಸಗಿ ಶಾಲೆಗಳಿಂದ ಇಂದು ಸುದ್ದಿಗೋಷ್ಠಿ ನಡೆಸಲಾಗಿತ್ತು. ಸುದ್ದಿಗೋಷ್ಟಿಯಲ್ಲಿ ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ  ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ .ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ .ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಶಾಲೆಗಳಲ್ಲಿ ಅಳವಡಿಕೆ ಮಾಡಲಾಗ್ತಿದೆ.ಹೀಗಾಗಿ ಅನಿವಾರ್ಯವಾಗಿ ಪ್ರದಾನಮಂತ್ರಿಗಳಿಗೆ ಪತ್ರ ಬರೆಯಬೇಕಾದ ಅನಿವಾರ್ಯತೆ ಎದುರಾಗಿದೆ.
 
ಪ್ರತಿ ವರ್ಷ ಮಾನ್ಯತೆ ನವೀಕರಣ ಅಂತ ಸಚಿವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ .ಶಾಲೆಗಳಲ್ಲಿ ರಿನಿವಲ್ ಹಣ ಇಲ್ಲದೆ ಮಾನ್ಯತೆ ನವೀಕರಣ ಮಾಡಲ್ಲ ಅಂತಿದ್ದಾರೆ.ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ಡ್ಯಾಕ್ಯುಮೆಂಟ್ಸ್ ಇದೆ.ಲಂಚ ಪಡೆಬೇಕು ಅಂತ ಹೊಸ ಮಾರ್ಗ ಶುರುಮಾಡಿದ್ದಾರೆ.ಅಗ್ನಿ ಸುರಕ್ಷಿತೆ ಹೆಸರಲ್ಲಿ ಹಣ ಪಿಕುತ್ತಿದ್ದಾರೆ .ಇದರಿಂದ ಬಜೆಟ್ ಶಾಲೆಗಳಿಗೆ ಸಮಸ್ಯೆಯಾಗ್ತಿದೆ.
 
RTE ಮರುವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು.ಹೀಗಾಗಿ ಹಣ ತೆಗೆದುಕೊಳ್ಳುವುದೇ ಬೇಡ ಅಂತ ಡಿಸೈಡ್ ಮಾಡಿದ್ದೇವೆ .ಅಗ್ನಿ ಸುರಕ್ಷೆಯನ್ನು ಅನ್ ಲೈನ್ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದೇವೆ .ಆದ್ರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ .NOC ಪಡೆಯಲು ಪ್ರತಿ ಟೇಬಲ್ ಮೂವ್ ಆಗುತ್ತೆ BEO ಆಫೀಸ್ TO ಮಿನಿಸ್ಟರ್ ವರೆಗೆ ಹಣ ಕೊಡಬೇಕು .ಪ್ರತಿ ಟೇಬಲ್ ಗೂ ಹಣ ಕೊಡಬೇಕು ಎಂದು ಸರ್ಕಾರವನ್ನ ಲೋಕೇಶ್ ತಾಳಿಕಟ್ಟೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
 
 ಖಾಸಗಿ ಶಾಲೆಗಳಿಂದ ಹಣ ವಸೂಲಿಗೆ ಸೃಷ್ಟಿ ಮಾಡಿರೋ ಸಮಸ್ಯೆಗಳ ಪಟ್ಟಿ ಇಂತಿದೆ 
 
1 . RR( ಮಾನ್ಯತೆ ನವೀಕರಣ ) ನೀಡಲು ಲಕ್ಷಾಂತರ ಹಣ ಇಲಾಖೆಯ ಅಧಿಕಾರಿಗಳಿಗೆ ಕೊಡಬೇಕು 
 
2. ಲಂಚ ಪಡೆಯಲು ಹೊಸ ಮಾರ್ಗ  ಅನ್ವೇಷಣೆ ( ಅಗ್ನಿ ಸುರಕ್ಷತಾ ಪ್ರಮಾಣ ಪತ್ರಕ್ಕೆ )
 
3. RTE ಶುಲ್ಕ ಮರುಪಾವತಿ ಪಡೆಯಲು 30 ರಿಂದ 40 % ಲಂಚ ವಸೂಲಿ 
 
4. ಅನ್ಯ ಪಠ್ಯಕ್ರಮ ಅನುಸರಿಸಲು NOC ಗಾಗಿ ಬಾರಿ ಭ್ರಷ್ಟಾಚಾರ 
 
5. ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮೆ ಮಾಮೂಲಿ ವಸೂಲಿ 
 
6 . ವರ್ಷಕ್ಕೊಮ್ಮೆ ವರ್ಗಾವಣೆಯ ದಂಧೆ
 
7. ಸರ್ಕಾರಿ ಶಾಲೆಗಳನ್ನು ಮರೆತಿರುವ ಶಿಕ್ಷಣ ಮಂತ್ರಿಗಳು
 
8 . ಧಾರ್ಮಿಕ ಸೂಕ್ಷ್ಮ ವಿಚಾರಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದು
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ