Select Your Language

Notifications

webdunia
webdunia
webdunia
webdunia

ಮಹಿಳೆಯ ಬಳಿ ಕ್ಷಮೆಯಾಚಿಸಿದ ಪೋಪ್ ಫ್ರಾನ್ಸಿಸ್

ಮಹಿಳೆಯ ಬಳಿ ಕ್ಷಮೆಯಾಚಿಸಿದ ಪೋಪ್ ಫ್ರಾನ್ಸಿಸ್
ವ್ಯಾಟಿಕನ್ , ಶುಕ್ರವಾರ, 3 ಜನವರಿ 2020 (06:46 IST)
ವ್ಯಾಟಿಕನ್ : ಹೊಸ ವರ್ಷದ ದಿನದಂದು ಜನರನ್ನು ಅಭಿನಂದಿಸುತ್ತಿದ್ದ ವೇಳೆ ತಮ್ಮ  ಕೈಯನ್ನು ಹಿಡಿದುಕೊಂಡಿದ್ದ ಮಹಿಳೆಗೆ ಹೊಡೆದಿದ್ದ  ಪೋಪ್ ಫ್ರಾನ್ಸಿಸ್ ಇದೀಗ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.



ಹೊಸ ವರ್ಷಕ್ಕೆ ಪೋಪ್ ಫ್ರಾನ್ಸಿಸ್ ಮಕ್ಕಳನ್ನು ಅಭಿನಂದಿಸಿ ಹೊರಟು ನಿಂತಾಗ ಮಹಿಳೆಯೊಬ್ಬಳು ಅವರ ಕೈ ಹಿಡಿದುಕೊಂಡಳು. ಆಗ ಪೋಪ್ ಬೀಳುವುದಕ್ಕೆ ಮುಂದಾದಾಗ ಕೋಪಗೊಂಡು ಮಹಿಳೆಯ ಕೈಗೆ ಎರಡು ಪೆಟ್ಟುಕೊಟ್ಟು ಮುಂದೆ ಹೋದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಇದೀಗ ಈ ಬಗ್ಗೆ ಕೆಥೋಲಿಕ್ ಚರ್ಚ್ ನ ಮುಖ್ಯಸ್ಥರು ವ್ಯಾಟಿಕನ್ ನಲ್ಲಿ ಸಾಮೂಹಿಕ ಪ್ರಾಥನೆ ನಡೆಸುವ ಮುನ್ನ ಪೋಪ್ ಫ್ರಾನ್ಸಿಸ್ ಆ ಮಹಿಳೆಗೆ ಹೊಡೆದಿದ್ದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಬಂಪರ್ ನ್ಯೂಸ್ ; 12 ಸಾವಿರ ಕೋಟಿ ಸಂದಾಯ ಮಾಡಿದ ಮೋದಿ