Select Your Language

Notifications

webdunia
webdunia
webdunia
webdunia

ಹೊಸ ವರ್ಷದ ದಿನ ಹುಟ್ಟಿದ ಮಕ್ಕಳ ಸಂಖ್ಯೆಯಲ್ಲಿ ಭಾರತವೇ ನಂ.1

ಹೊಸ ವರ್ಷದ ದಿನ ಹುಟ್ಟಿದ ಮಕ್ಕಳ ಸಂಖ್ಯೆಯಲ್ಲಿ ಭಾರತವೇ ನಂ.1
ನವದೆಹಲಿ , ಗುರುವಾರ, 2 ಜನವರಿ 2020 (11:18 IST)
ನವದೆಹಲಿ: ಹೊಸವರ್ಷದ ದಿನ ಅಂದರೆ ಜನವರಿ 1 ರಂದು ಹುಟ್ಟಿದ ದಿನ ಅಂದರೆ ನಿಜಕ್ಕೂ ಅದೊಂಥರಾ ಸ್ಪೆಷಲ್. ಅಂತಹ ಸ್ಪೆಷಲ್ ಕ್ಷಣಕ್ಕೆ ನಿನ್ನೆಯೂ ಹಲವು ಮಕ್ಕಳು ಸಾಕ್ಷಿಯಾಗಿದ್ದಾರೆ.


ನಿನ್ನೆ ದಿನ ಭಾರತದಲ್ಲಿ ಒಟ್ಟು 67,385 ಮಕ್ಕಳ ಜನನವಾಗಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು. ಅಂದರೆ ಜನವರಿ 1 ರಂದು ಹುಟ್ಟಿದ ಮಕ್ಕಳ ಸಂಖ್ಯೆ ವಿಚಾರದಲ್ಲಿ ಭಾರತವೇ ವಿಶ್ವಕ್ಕೆ ಪ್ರಥಮ ಎನಿಸಿಕೊಂಡಿದೆ.

ಎರಡನೇ ಸ್ಥಾನದಲ್ಲಿ ನೆರೆಯ ಚೀನಾ ಇದ್ದು, ಅಲ್ಲಿ ನಿನ್ನೆ ಒಟ್ಟಾರೆ 46,229 ಮಕ್ಕಳ ಜನನವಾಗಿದೆ. ಮೂರನೇ ಸ್ಥಾನದಲ್ಲಿ ನೈಜೀರಿಯಾ (26,039), ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನ (16,787) ದೇಶ ಸ್ಥಾನ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ರಾಜ್ಯ ಕಾಂಗ್ರೆಸ್