Select Your Language

Notifications

webdunia
webdunia
webdunia
Friday, 18 April 2025
webdunia

ಭಾರತದ ಯಾವುದೇ ಪ್ರಧಾನಿಗೆ ತೋರದ ಗೌರವ ಪ್ರಧಾನಿ ಮೋದಿಗೆ ನೀಡಿದ ಚೀನಾ

ಪ್ರಧಾನಿ ಮೋದಿ
ನವದೆಹಲಿ , ಶನಿವಾರ, 28 ಏಪ್ರಿಲ್ 2018 (06:42 IST)
ನವದೆಹಲಿ: ಇದುವರೆಗೆ ಭಾರತದ ಪ್ರಧಾನಿಗಳು ಚೀನಾಕ್ಕೆ ಭೇಟಿ ನೀಡಿದ ಸಾಕಷ್ಟು ಸಂದರ್ಭಗಳಿವೆ. ಆದರೆ ಪ್ರಧಾನಿ ಮೋದಿಗೆ ನಿನ್ನೆ ವುಹಾನ್ ನಲ್ಲಿ ನೀಡಿದ ಗೌರವವನ್ನು ಚೀನಾ ಅಧ್ಯಕ್ಷರು ಇದುವರೆಗೆ ಯಾರಿಗೂ ನೀಡಿಲ್ಲ.

ಚೀನಾದ ವುಹಾನ್ ನಲ್ಲಿ ಪ್ರಧಾನಿ ಮೋದಿಯನ್ನು ಸ್ವತಃ ಚೀನಾ ಅಧ್ಯಕ್ಷ ಕ್ಸಿನ್ ಜಿನ್ ಪಿಂಗ್ ಬಂದು ಖುದ್ದಾಗಿ ಸ್ವಾಗತಿಸಿದ್ದರು. ಇದು ಎರಡನೇ ಬಾರಿ ಪ್ರಧಾನಿ ಮೋದಿಯನ್ನು ಚೀನಾ ಅಧ್ಯಕ್ಷರು ಈ ರೀತಿ ಬರಮಾಡಿಕೊಂಡಿದ್ದಾರೆ.

ಈ ಬಗ್ಗೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಉಲ್ಲೇಖಿಸಿದ ಪ್ರಧಾನಿ ಮೋದಿ, ನಮ್ಮ ದೇಶದ ಪ್ರಧಾನಿಗಳಲ್ಲಿ ಖುದ್ದಾಗಿ ನಿಮ್ಮಿಂದ ಸ್ವಾಗತ ಸಿಕ್ಕಿದ್ದು ನನಗೆ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದು, ಪರಸ್ಪರ ಜಾಗತಿಕ ಸೌಹಾರ್ದತೆಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಂದೇ ಮಾತರಂ ಹಾಡಿಗೆ ಗೌರವ ಕೊಡುವಷ್ಟು ತಾಳ್ಮೆ ರಾಹುಲ್ ಗಾಂಧಿಗಿಲ್ಲವೇ? ಬಿಜೆಪಿ ಟೀಕೆ