ಹೀಗೊಂದು ಫೋಟೋ ಶೂಟ್ ಮಾಡಿ ಕೆಲಸ ಕಳೆದುಕೊಂಡ ಫೋಟೋಗ್ರಾಫರ್

Webdunia
ಮಂಗಳವಾರ, 31 ಜುಲೈ 2018 (15:54 IST)
ಢಾಕಾ : ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಮೆಟ್ಟಿಲು ಮೇಲೆ ಕುಳಿತು ಜೋಡಿಯೊಂದು ಕಿಸ್ ಮಾಡುತ್ತಿರುವ  ಫೋಟೋವನ್ನು ಶೂಟ್ ಮಾಡಿದಕ್ಕೆ  ಫೋಟೋಗ್ರಾಫರ್  ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.


ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಮೆಟ್ಟಿಲು ಮೇಲೆ ಕುಳಿತು ಜೋಡಿಯೊಂದು ಮುಂಗಾರು ಮಳೆಯಲ್ಲಿ ಕಿಸ್ ಮಾಡುತ್ತಿರುವಾಗ ನ್ಯೂಸ್​ ಪೊರ್ಟಲ್ ನ ಫೋಟೋಗ್ರಾಫರ್​ ಜಿಬೋನ್​ ಅಹ್ಮದ್​ ತಮ್ಮ ಕ್ಯಾಮರಾದಲ್ಲಿ ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.


ಈ ಫೋಟೋವನ್ನು 'ಸಾಂಗ್ಸ್​ ಆಫ್​ ರೈನ್ಸ್​​ - ಲೆಟ್​ ಲವ್​ ಬಿ ಫ್ರೀ' ಎಂಬ ಶಿರ್ಷಿಕೆ ಕೊಟ್ಟು 'Purboposhchimbd' ನ್ಯೂಸ್​ ಪೊರ್ಟಲ್​ನಲ್ಲಿ ಬಳಸಲಾಗಿದೆ. ನಂತರ ಈ ಕಿಸ್ಸಿಂಗ್​ ಸೋಷಿಯಲ್​ ಮೀಡಿಯಾದಲ್ಲಿಯೂ ಸಖತ್ ವೈರಲ್ ಆಗಿತ್ತು. ಆದರೆ ಇದಕ್ಕೆ ಬಾರೀ ಟೀಕೆಗಳು ವ್ಯಕ್ತವಾದ ಕಾರಣ ನ್ಯೂಸ್​ ಪೊರ್ಟಲ್, ಇದೊಂದು ಪೂರ್ವನಿರ್ಧರಿತ ಫೋಟೋ ಆಗಿದ್ದು, ಫೋಟೋಗ್ರಾಫರ್ ಕ್ಷಮೆ ಕೇಳಿಬೇಕೆಂದು ಹೇಳಿ ಆತನನ್ನು ಕೆಲಸದಿಂದ ವಜಾಗೊಳಿಸಿದೆ.


ಇದಕ್ಕೆ  ಫೋಟೋಗ್ರಾಫರ್ ಜಿಬೋನ್​ ಅಹ್ಮದ್​ ತಮ್ಮ ಫೇಸ್​ಬುಕ್​ ಮೂಲಕ ಪ್ರತಿಕ್ರಿಯಿಸಿದ್ದು, ಈ ಫೋಟೋ ಸತ್ಯ-ಮಿಥ್ಯಗಳ ಕಥೆಯನ್ನು ಹುಟ್ಟು ಹಾಕುತ್ತಿದೆ ಎಂದು ನಾನು ಊಹೆಯೇ ಮಾಡಿರಲಿಲ್ಲ.ಅಲ್ಲದೇ, ಈ ಕಿಸ್ಸಿಂಗ್​ ಫೋಟೋವನ್ನು ಇತರ ಫೋಟೋಗ್ರಾಫರ್​​ಗಳ ಕೂಡ ಕ್ಲಿಕ್ಕಿಸಿದ್ದಾರೆ ಎಂದು ​ ಹೇಳಿದ್ದಾನೆ. ಆದರೆ ಈ ಫೋಟೋದಲ್ಲಿರುವ ಯುವಕನಾಗಲಿ ಯುವತಿಯಾಗಲಿ ಇದುವೆರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ: ಪಕ್ಷದಿಂದ ಅಮಾನತುಗೊಂಡ ಪಂ.ಬಂಗಾಳ ಶಾಸಕನ ಹೊಸ ನಡೆ

ವಿದೇಶದಿಂದ ಬರುವ ಗಣ್ಯರ ಭೇಟಿಗಿಲ್ಲ ಅವಕಾಶ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಾಸ್ಟರ್ ಸ್ಟ್ರೋಕ್

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 200ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು, ಇಲ್ಲಿದೆ ಮಾಹಿತಿ

ನಾವು ಮನೆಗೆ ಟೈಮೇ ಕೊಡಲ್ಲ, ನನ್ನ ಮಕ್ಳು ಮಾಡಿದ ಸಾಧನೆ ನಾನು ಮಾಡಿರಲಿಲ್ಲ: ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments