ಬೆಂಗಳೂರು : ನಟಿ ನಿವೇಥಾ ಪೇತುರಾಜ್ ಅವರು ಕೆಲವು ಚಾನಲ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಯಾಕೆಂದರೆ ಇತ್ತೀಚೆಗೆ ಕೆಲವು ಚಾನಲ್‌ಗಳು ಹಾಗೂ ವೆಬ್‌ಸೈಟ್‌ಗಳು ನಿವೇಥಾ ಪೇತುರಾಜ್ ಅವರ ಬಿಕಿನಿ ಫೋಟೋಗಳನ್ನು ವೈರಲ್ ಮಾಡಿದ್ದವು. ಆದರೆ ಅವೆಲ್ಲಾ ಅವರ ಫೋಟೋಗಳಾಗಿರದೆ ಫೇಕ್ ಫೋಟೋಗಳಾಗಿದ್ದವು. ಇದರಿಂದ ಕೋಪಗೊಂಡ ನಟಿ ನಿವೇಥಾ ಪೇತುರಾಜ್ ಅವರು,’ ಆ ಫೋಟೋಗಳು ನನ್ನದಲ್ಲ. ಆದರೂ ಕೆಲವು ವೆಬ್‌ಗಳು ಅತಿಯಾಗಿ ಅವುಗಳ ಮೇಲೆ ನನ್ನ ಹೆಸರು ಮುದ್ರಿಸುತ್ತಿವೆ. ನನ್ನ ಗೌರವಕ್ಕೆ ಧಕ್ಕೆ ತಂದಿವೆ. ಇಂತಹ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳುತ್ತಿದ್ದೇನೆ. ಈಗಾಗಲೆ ಲೀಗಲ್ ನೋಟೀಸ್ ಸಿದ್ಧಪಡಿಸಿದ್ದೇನೆ’ ಎಂದು ಕಿಡಿಕಾರಿದ್ದಾರೆ. ಹಾಗೇ ಈ ಫೋಟೋಗಳು ವರ್ಷಿಣಿ ಪಾಕಲ್ ಎಂಬ ಮಾಡೆಲ್ ರದ್ದು ಎಂಬುದಾಗಿ ಫೋಟೋಗ್ರಾಫರ್ ಪ್ರಸೂನ್ ಪ್ರಶಾಂತ್ ಅವರಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ