Daily Horoscope
✕

ಕೀಕಿ ಚಾಲೆಂಜ್: ಬಿಗ್ ಬಾಸ್ ಸ್ಪರ್ಧಿ ನಿವೇದಿತಾಗೌಡ ವಿರುದ್ಧ ಟೀಕೆಗಳ ಸುರಿಮಳೆ…

Webdunia
ಮಂಗಳವಾರ, 31 ಜುಲೈ 2018 (15:37 IST)
ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಿಸಿರುವ ಕೀಕಿ ಚಾಲೆಂಜ್ ನ್ನ ಸ್ವೀಕರಿಸಿರುವ ಬಿಗ್ ಬಾಸ್ ಸ್ಪರ್ಧಿ ನಿವೇದಿತಗೌಡ ಚಲಿಸುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ಈಗ ಹಲವು ಟೀಕೆಗಳನ್ನ ಹುಟ್ಟಿ ಹಾಕಿದೆ.
 

ಏನಿದು ಕೀಕಿ ಚಾಲೆಂಜ್:

ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ ಮತ್ತು ಮಹರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕೀಕಿ ಚಾಲೆಂಜ್ (ಚಲಿಸುತ್ತಿರುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಮತ್ತೇ ಕಾರಿಗೆ ಹತ್ತುವುದು) ನಿಂದ ಸರಣಿ ಅಫಘಾತಗಳು ಸಂಭವಿಸಿದ್ದರಿಂದ ಈ ಮೇಲಿನ ಪೊಲೀಸರು ಲಾಠಿ ಹಿಡಿದು ಈ ಚಾಲೆಂಜ್ ಮಾಡುವವರಿಗೆ ಸರಿಯಾದ ಪಾಠ ಕಲಿಸುತ್ತಿದ್ದಾರೆ.

ಕೀಕಿ ಚಾಲೆಂಜ್ ಸ್ವೀಕರಿಸಿರುವ ನಿವೇದಿತಾಗೌಡ:

ಕೀಕಿ ಚಾಲೆಂಜ್ ಸ್ವೀಕರಿಸಿರುವ ಬಿಗ್ ಬಾಸ್ ಸ್ಪರ್ಧಿ ಗೊಂಬೆ ಎಂದು ಪ್ರಸಿದ್ದಿ ಪಡೆದುಕೊಂಡಿರುವ ನಿವೇದಿತ ಗೌಡ  ನಗರದ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಿಂದ ಇಳಿದು ಸುಮಾರು 15 ಸೆಕೆಂಡ್ ಗಳ ಕಾಲ ಡ್ಯಾನ್ಸ್ ಮಾಡಿ ಮತ್ತೆ ಕಾರು ಹತ್ತುವ ಮೂಲಕ ಯಶಸ್ವಿಯಾಗಿ ಕೀಕಿ ಚಾಲೆಂಜ್ ಮುಗಿಸಿದ್ದಾಳೆ. ಈ ವಿಡಿಯೋವನ್ನ ನಿವೇದಿತಾ ಗೌಡ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು , ಈ ವಿಡಿಯೋ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿವೆ.

ಈ ವಿಡಿಯೋ ನೋಡಿದ ಹಲವು ಜನರು ನಿವೇದಿತಾ ಈ ತರಹ ಮಾಡೊಕೆ ಹೋಗಿ ತುಂಬ ಜನರಿಗೆ ಅಫಘಾತಗಳು ಸಂಭವಿಸಿದೆ. ಇದು ಕರ್ನಾಟಕದಲ್ಲಿ ಬ್ಯಾನ್ ಮಾಡಿದ್ದಾರೆ. ನೀವೆಲ್ಲಾ ಸೆಲೆಬ್ರಿಟಿಗಳು. ನೀವು ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ನೀವೆ ಈತರಹ ಮಾಡಿದರೆ ಹೇಗೆ? ಎಂದು ಹಲವರು ಟೀಕೆ ಮಾಡಿದ್ದಾರೆ.




ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿ ಬದುಕೇ ನಮಗೆ ಪಾಠ ಶಾಲೆ: ಬಿಕೆ ಹರಿಪ್ರಸಾದ್

Gold Price: ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯಗೆ ಹಿಂಬದಿ ಸೀಟು ಯಾಕೆ

ಮನೆ ಕಟ್ಟುವಾಗ ಸಿಕ್ತು 13 ಅಡಿ ಉದ್ದದ ಬೃಹತ್ ಕಾಳಿಂಗ: Video

ಮುಂದಿನ ಸುದ್ದಿ
Show comments