Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿರುವ ಬಂದರು ಪಾಕಿಸ್ತಾನದಿಂದ ಉಡೀಸ್: ಅಬ್ಬಾ ಪಾಕಿಸ್ತಾನಿಯರ ಬುದ್ಧಿವಂತಿಕೆಯೇ..

Paskitan Army

Krishnaveni K

ನವದೆಹಲಿ , ಭಾನುವಾರ, 11 ಮೇ 2025 (10:20 IST)
Photo Credit: X
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ನಡುವೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಪಾಕಿಸ್ತಾನಿಯರು ಈಗ ಬೆಂಗಳೂರು ಬಂದರನ್ನು ಉಡೀಸ್ ಮಾಡಿದ್ದಾರಂತೆ! ಅಷ್ಟಕ್ಕೂ ಬೆಂಗಳೂರಿನಲ್ಲಿ ಬಂದರು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡ್ಬೇಡಿ.

ಭಾರತದ ವಿರುದ್ಧ ನಾವು ಯುದ್ಧ ಗೆದ್ದಿದ್ದೇವೆ ಎಂದು ಬೀಗುತ್ತಿರುವ ಪಾಕಿಸ್ತಾನ ಸುಳ್ಳಿನ ಕಂತೆಯನ್ನೇ ಹರಡುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಪ್ರಜೆಯೊಬ್ಬ ಪಾಕಿಸ್ತಾನ ಸೇನೆ ಬೆಂಗಳೂರು ಬಂದರನ್ನು ಉಡೀಸ್ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.

ಆತನ ಟ್ವೀಟ್ ಈಗ ಇನ್ನಿಲ್ಲದಂತೆ ಟ್ರೋಲ್ ಆಗುತ್ತಿದೆ. ಸ್ವತಃ ಭಾರತದ ಐಪಿಎಸ್ ಅಧಿಕಾರಿಯೊಬ್ಬರು ಇದನ್ನು ಟ್ರೋಲ್ ಮಾಡಿದ್ದು, ಬೆಂಗಳೂರಿನಲ್ಲಿ ಪೋರ್ಟ್ (ಬಂದರು) ಇಲ್ಲ ಯುಎಸ್ ಬಿ ಪೋರ್ಟ್ ಮಾತ್ರ ಇರೋದು ಎಂದು ಕಾಲೆಳೆದಿದ್ದಾರೆ.

ಇನ್ನು ಕೆಲವರು ಅಬ್ಬಾ ಪಾಕಿಸ್ತಾನಿಯರ ತಲೆಯೇ ನೊಬೆಲ್ ಪ್ರೈಝ್ ಕೊಡಬೇಕು ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರು ಇರೋದು ಭಾರತದ ಕರಾವಳಿಯಲ್ಲಲ್ಲ. ಇಲ್ಲಿಗೆ ಬಂದರು ಇಲ್ಲವೇ ಇಲ್ಲ. ಹಾಗಿದ್ದರೂ ಪಾಕಿಸ್ತಾನ ಸೇನೆ ಉಡೀಸ್ ಮಾಡಿರುವ ಬೆಂಗಳೂರು ಬಂದರು ಯಾವುದೋ ಎಂದು ಹಲವರು ತಮಾಷೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

India Pakistan: ಎಲ್ಲರೂ ಇಂದಿರಾ ಗಾಂಧಿಯಾಗಲು ಸಾಧ್ಯವಿಲ್ಲ, ಮೋದಿಗೆ ಟೀಕೆ