Select Your Language

Notifications

webdunia
webdunia
webdunia
webdunia

India Pakistan: ಟ್ರಂಪ್ ಹೇಳಿದ್ದಕ್ಕೇ ಕದನ ವಿರಾಮಕ್ಕೆ ಒಪ್ಪಿದ್ದೇಕೆ, ಶುರುವಾಯ್ತು ಆಕ್ರೋಶ

PM Modi meeting

Krishnaveni K

ನವದೆಹಲಿ , ಭಾನುವಾರ, 11 ಮೇ 2025 (09:21 IST)
ನವದೆಹಲಿ: ಪಾಕಿಸ್ತಾನ ವಿರುದ್ಧ ಕದನ ವಿರಾಮ ಘೋಷಣೆಗೆ ಒಪ್ಪಿದ್ದಕ್ಕೆ ಇದೀಗ ಭಾರತದಲ್ಲೇ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರಂಪ್ ಹೇಳಿದ್ದಕ್ಕೆ ಕದನ ವಿರಾಮಕ್ಕೆ ಒಪ್ಪಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತು.

ಇದರಿಂದಾಗಿ ಭಾರತವೂ ಪಾಕಿಸ್ತಾನಕ್ಕೆ ದಾಳಿ ಮಾಡಿ ತಿರುಗೇಟು ನೀಡಿತ್ತು. ಎರಡೂ ದೇಶಗಳ ನಡುವೆ ಸಂಘರ್ಷ ತಾರಕಕ್ಕೇರುತ್ತಿದ್ದಂತೇ ಮಧ್ಯಪ್ರವೇಶಿಸಿದ ಅಮೆರಿಕಾ ಸಂಧಾನ ನಡೆಸುವಂತೆ ಮೊದಲು ಪಾಕಿಸ್ತಾನಕ್ಕೆ ತಾಕೀತು ಮಾಡಿತು. ಅದರಂತೆ ಪಾಕಿಸ್ತಾನದ ಸೇನಾ ಹಿರಿಯ ಅಧಿಕಾರಿಗಳು ಭಾರತೀಯ ಸೇನಾ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸೋಮವಾರದವರೆಗೆ ಕದನ ವಿರಾಮ ನಡೆಸಲು ಒಪ್ಪಿಗೆ ನೀಡಿದ್ದರು. ಸೋಮವಾರ ಎರಡೂ ದೇಶಗಳ ಪ್ರತಿನಿಧಿಗಳು ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಲಿವೆ.

ಆದರೆ ಇದು ಭಾರತದಲ್ಲಿ ಕೆಲವರಿಂದ ವಿರೋಧಕ್ಕೆ ಕಾರಣವಾಗಿದೆ. ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ ತೀರಿಸುತ್ತೇವೆ ಎಂದು ಹೊರಟ ಭಾರತ ಈಗ ಅಮೆರಿಕಾ ಹೇಳಿದ ಮಾತ್ರಕ್ಕೆ ಕದನ ವಿರಾಮಕ್ಕೆ ಒಪ್ಪಿದ್ದೇಕೆ? ಪಾಕಿಸ್ತಾನದ ನರಿ ಬುದ್ಧಿ ಗೊತ್ತಿದ್ದರೂ ಕೇಂದ್ರ ಸರ್ಕಾರಕ ಮೃದು ಧೋರಣೆ ತಳೆದಿದ್ದು ಯಾಕೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಬಿಸಿಲಿನಿಂದ ತತ್ತರಿಸಿದ್ದವರಿಗೆ ಗುಡ್ ನ್ಯೂಸ್