ಜಮ್ಮು ಕಾಶ್ಮೀರ: ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನ ಮತ್ತೆ ದಾಳಿ ಆರಂಭಿಸಿದೆ. ಇಂದು ಮೂರು ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡ್ರೋಣ್ ದಾಳಿ ನಡೆಸುತ್ತಿದೆ. ಇದನ್ನು ಭಾರತೀಯ ಸೇನೆ ತಕ್ಕ ರೀತಿಯಲ್ಲಿ ಹಿಮ್ಮೆಟ್ಟಿಸುತ್ತಿದೆ.
ಜಮ್ಮು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯವನ್ನು ಗುರಿಯಾಗಿರಿಸಿಕೊಂಡು ಪಾಕ್ ದಾಳಿ ಆರಂಭಿಸಿದೆ. ಈ ಮೂರು ರಾಜ್ಯಗಳಲ್ಲಿ ಈಗ ಸಂಪೂರ್ಣ ಬ್ಲ್ಯಾಕ್ ಔಟ್ ಮಾಡಲಾಗಿದೆ. ಜನರನ್ನು ಮನೆಯೊಳಗೇ ಇರುವಂತೆ ಸೂಚನೆ ನೀಡಲಾಗಿದೆ.
ಇದೀಗ ಬಂದಿರುವ ಮಾಹಿತಿ ಪ್ರಕಾರ ಒಂದು ಕುಟುಂಬ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೋಷಿಯಾರ್ ಪುರ್, ತರನ್ ತಾರನ್ ನಲ್ಲಿ ಪಾಕ್ ಡ್ರೋಣ್ ದಾಳಿ ನಡೆಸಿದ್ದು, ಭಾರತದ ಏರ್ ಡಿಫೆನ್ಸ್ ಸಿಸ್ಟಂ ಇದನ್ನು ಹೊಡೆದುರುಳಿಸಿದೆ.
ನಿನ್ನೆಯೂ ಪಾಕ್ ಡ್ರೋಣ್ ದಾಳಿಯನ್ನು ಏರ್ ಡಿಫೆನ್ಸ್ ಸಿಸ್ಟಂನಿಂದ ತಡೆಯಲಾಗಿತ್ತು. ಇಂದೂ ಕೂಡಾ ಭಾರತೀಯ ಸೇನೆ ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.