Select Your Language

Notifications

webdunia
webdunia
webdunia
webdunia

India, Pakistan: ಈ ಸಂದರ್ಭದಲ್ಲಿ ಭಾರತೀಯರು ದಯವಿಟ್ಟು ಈ ತಪ್ಪು ಕೆಲಸಗಳನ್ನು ಮಾಡಬೇಡಿ

ಭಾರತ vs ಪಾಕಿಸ್ತಾನ ಲೈವ್

Sampriya

ನವದೆಹಲಿ , ಶುಕ್ರವಾರ, 9 ಮೇ 2025 (16:43 IST)
Photo Credit X
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಜೋರಾಗಿದ್ದು, ಆಪರೇಷನ್ ಸಿಂಧೂರ್ ಮೂಲಕ ಪಾಕ್‌ಗೆ ಭಾರತ ದಿಟ್ಟ ಉತ್ತರವನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ಸೇನಾ ಕಾರ್ಯಾಚರಣೆಗಳ ನೇರ ಪ್ರಸಾರ ಮಾಡದಂತೆ ಸೂಚನೆಯನ್ನು ನೀಡಲಾಗಿದೆ.

ದೇಶದ ಭದ್ರತಾ ದೃಷ್ಟಿಯಿಂದ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ತೋರಿಸದಂತೆ ಎಲ್ಲಾ ಮಾಧ್ಯಮಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

ಮಾಧ್ಯಮಗಳು, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ ನೀಡಿರುವ ಸಚಿವಾಲಯ, ಮುಖ್ಯವಾಗಿ ನೇರ ಪ್ರಸಾರ, ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಮೂಲಗಳನ್ನು ಆಧರಿಸಿದ ವರದಿಗಳನ್ನು ಪ್ರಸಾರ ಮಾಡುವಂತಿಲ್ಲ. ಜತೆಗೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಕೂಡದು, ಇದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದೆ.

 ಇದಕ್ಕೆ ಈ ಹಿಂದಿನ ಘಟನೆಗಳೇ ಕಾರಣ. ಉದಾಹರಣೆಗೆ ಕಾರ್ಗಿಲ್‌ ಯುದ್ಧ, ಮುಂಬೈ ದಾಳಿ (26/11), ಕಂದಹಾರ್ ಹೈಜಾಕ್‌ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಅನಿಯಂತ್ರಿತ ಪ್ರಸಾರವು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ನಿರೀಕ್ಷಿಸದ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.

ಮಾಧ್ಯಮ, ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಅಥವಾ ಒಬ್ಬ ವ್ಯಕ್ತಿ ದೇಶದ ಭದ್ರೆತಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.  ಆದ್ದರಿಂದ ಪ್ರತಿಯೊಬ್ಬರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Dawood Ibrahim: ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಭಾರತವೆಂದರೆ ಎಷ್ಟು ಭಯ ನೋಡಿ