ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಕೆಗೆ ಬಹುಮಾನವನ್ನೇ ಕೊಡಬೇಕು. ಭಾರತ ದಾಳಿಯನ್ನು ತಾವೇಕೆ ತಡೆಯಲಿಲ್ಲ ಎಂದು ಸಂಸತ್ ನಲ್ಲಿ ಅವರು ವಿವರಿಸಿದ ಪರಿ ನೋಡಿ ಭಾರತೀಯರು ನಗುತ್ತಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ಕ್ಷಿಪಣಿಗಳನ್ನು ಹಾರಿಸಿ ಚೆಂಡಾಡುತ್ತಿದ್ದರೆ ಪಾಕಿಸ್ತಾನ ಕೈಕಟ್ಟಿ ಕೂತಿತ್ತು ಎನ್ನುವುದು ಅಲ್ಲಿಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪ್ರತಿರೋಧವನ್ನೂ ತೋರಲಿಲ್ಲ ಎಂಬ ಅಪವಾದಗಳಿಗೆ ಅಲ್ಲಿನ ರಕ್ಷಣಾ ಮಂತ್ರಿ ಖವಾಜ ನೀಡಿದ ಉತ್ತರ ನಿಜಕ್ಕೂ ನಗೆಪಾಟಲಿಗೀಡಾಗಿದೆ.
ನಾವು ಬೇಕೆಂದೇ ಭಾರತದ ದಾಳಿಯನ್ನು ನಮ್ಮ ರಕ್ಷಣಾ ವ್ಯವಸ್ಥೆ ಬಳಸಿ ತಡೆಯಲಿಲ್ಲ. ಯಾಕೆಂದರೆ ಇದರಿಂದ ಭಾರತಕ್ಕೆ ನಮ್ಮ ಸೇನಾ ನೆಲಗಳ ಬಗ್ಗೆ ಮಾಹಿತಿ ಸಿಗುವುದು ನಮಗೆ ಬೇಕಿರಲಿಲ್ಲ ಎಂದಿದ್ದಾರೆ. ಅವರ ಈ ಉತ್ತರ ನಗೆಪಾಟಲಿಗೀಡಾಗಿದೆ.
ಅಂದರೆ ತಮ್ಮ ದೇಶ ಸರ್ವನಾಶವಾದರೂ ತೊಂದರೆಯಿಲ್ಲ, ತಮ್ಮ ನಾಗರಿಕರು ಸತ್ತರೂ ಚಿಂತೆಯಿಲ್ಲ, ಸೈನ್ಯ ಮಾತ್ರ ಸೇಫ್ ಆಗಿರಬೇಕು ಎಂಬುದು ಖವಾಜ ವರಸೆಯಿದ್ದಂತಿದೆ. ಇದೀಗ ಭಾರೀ ಟ್ರೋಲ್ ಗೊಳಗಾಗಿದೆ.