Select Your Language

Notifications

webdunia
webdunia
webdunia
webdunia

India Pakistan: ಪಾಕಿಸ್ತಾನದ ಮುಂದೆ ಭಾರತ ಏನೆಲ್ಲಾ ಬೇಡಿಕೆಯಿಡಬಹುದು

India Pakistan

Krishnaveni K

ನವದೆಹಲಿ , ಭಾನುವಾರ, 11 ಮೇ 2025 (09:05 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿದ್ದು ಸೋಮವಾರ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಲಿದೆ. ಈ ಮಾತುಕತೆ ವೇಳೆ ಭಾರತ ಎದುರಾಳಿ ರಾಷ್ಟ್ರದ ಮುಂದೆ ಏನೆಲ್ಲಾ ಬೇಡಿಕೆಯಿಡಬಹುದು.

ಪಾಕಿಸ್ತಾನದ ಜೊತೆ ಮಾತುಕತೆ ವೇಳೆ ಭಾರತ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಡಬಹುದು. ಅತ್ತ ಪಾಕಿಸ್ತಾನವೂ ಕೆಲವೊಂದು ಬೇಡಿಕೆಗಳನ್ನು ಮುಂದಿಡಬಹುದಾಗಿದೆ.

ಇದರಲ್ಲಿ ಪ್ರಮುಖವಾಗಿ ಭಯೋತ್ಪಾದನೆ ನಿಗ್ರಹವಾಗಿದೆ. ಇದುವರೆಗೂ ಭಾರತಕ್ಕೆ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಿಸುವುದಾಗಿ ಕೇವಲ ಮಾತಿನ ಭರವಸೆ ನೀಡುತ್ತಿತ್ತಷ್ಟೇ ಹೊರತು ಕ್ರಮ ಕೈಗೊಳ್ಳುತ್ತಿರಲಿಲ್ಲ. ಹೀಗಾಗಿ ಈ ಬಾರಿ ಭಾರತ ಕೆಲವು ಭಯೋತ್ಪಾದಕರನ್ನು ತನ್ನ ವಶಕ್ಕೆ ಒಪ್ಪಿಸಲು ಬೇಡಿಕೆಯಿಡಬಹುದು. ಈಗಾಗಲೇ ಭಾರತ ಮುಂದಿನ ದಿನಗಳಲ್ಲಿ ಭಯೋತ್ಪಾದಕ ದಾಳಿಯನ್ನು ಯುದ್ಧ ಎಂದು ಪರಿಗಣಿಸಲಾಗುವುದು ಎಂದು ಈಗಾಗಲೇ ಖಡಕ್ ಘೋಷಣೆ ಮಾಡಿದೆ.

ಅತ್ತ ಪಾಕಿಸ್ತಾನವೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪುನಃಸ್ಥಾಪನೆ ಮಾಡಲು ಬೇಡಿಕೆಯಿಡಬಹುದು. ಆದರೆ ಎರಡೂ ದೇಶಗಳೂ ಬೇಡಿಕೆಗಳಿಗೆ ಒಪ್ಪದೇ ಹೋದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣವಾದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ