ಇಸ್ಲಾಮಾಬಾದ್ : ಉಭಯ ದೇಶಗಳ ನಡುವಿನ ಜಲ ವಿವಾದದ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ನಿಯೋಗದ 5 ಸದಸ್ಯರು ಮೇ 30-31 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಂಧೂ ನದಿ ವಿವಾದವನ್ನು ಬಗೆಹರಿಸುವ ಬಗ್ಗೆ ಮೇ 30 ಹಾಗೂ 31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ಕಮಿಷನರ್ ಸೈಯದ್ ಮಹಮ್ಮದ್ ಮೆಹರ್ ಅಲಿ ಷಾ ತಿಳಿಸಿದ್ದಾರೆ.
ಪಾಕಿಸ್ತಾನದ ನಿಯೋಗ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವಾಸ ಮಾಡಲಿದ್ದು, ಭಾರತದೊಂದಿಗಿನ ಮಾತುಕತೆಯಲ್ಲಿ ಪ್ರವಾಹ ಮುನ್ಸೂಚನೆಯ ದತ್ತಾಂಶವನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಪಿಸಿಐಡಬ್ಲ್ಯು(ಸಿಂಧೂ ನೀರಿನ ಪಾಕಿಸ್ತಾನದ ಆಯುಕ್ತ)ವಿನ ವಾರ್ಷಿಕ ವರದಿಯನ್ನು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.