Select Your Language

Notifications

webdunia
webdunia
webdunia
webdunia

ಮುಂಬೈ ಭಯೋತ್ಪಾದನ ದಾಳಿ ಪ್ರಕರಣದಲ್ಲಿ ವಾದಿಸಿದ ಸರ್ಕಾರಿ ವಕೀಲರನ್ನು ಕೈಬಿಟ್ಟ ಪಾಕಿಸ್ತಾನ

ಮುಂಬೈ ಭಯೋತ್ಪಾದನ ದಾಳಿ ಪ್ರಕರಣದಲ್ಲಿ ವಾದಿಸಿದ  ಸರ್ಕಾರಿ ವಕೀಲರನ್ನು ಕೈಬಿಟ್ಟ ಪಾಕಿಸ್ತಾನ
ಇಸ್ಲಾಮಾಬಾದ್ , ಸೋಮವಾರ, 30 ಏಪ್ರಿಲ್ 2018 (07:30 IST)
ಇಸ್ಲಾಮಾಬಾದ್ : ಮುಂಬೈ ಭಯೋತ್ಪಾದನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪರ ವಾದಿಸುತ್ತಿದ್ದ ಸರ್ಕಾರಿ ವಕೀಲರನ್ನು ಇದೀಗ ಪಾಕಿಸ್ತಾನದ ಆಂತರಿಕ ಸಚಿವಾಲಯ ತೆಗೆದುಹಾಕಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


2008ರ ನವೆಂಬರ್ ನಲ್ಲಿ ಲಷ್ಕರ್ ಇ ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆ ಮುಂಬೈನಲ್ಲಿ ಉಗ್ರ ದಾಳಿ ನಡೆಸಿದ್ದು ಈ ದಾಳಿಯಲ್ಲಿ166 ಮಂದಿ ಮೃತಪಟ್ಟಿದ್ದು 300 ಮಂದಿ ಗಾಯಗೊಂಡಿದ್ದರು. ಮಹತ್ವದ ಪ್ರಕರಣದಲ್ಲಿ ಪ್ರಾಸಿಕ್ಯೂಟರ್ ಚೌಧರಿ ಅಝರ್‌ ಅವರು 2009ರಿಂದಲೂ ಪಾಕಿಸ್ತಾನ ಸರಕಾರದ ಪರವಾಗಿ ವಾದಿಸಿದ್ದರು. ಆದರೆ ಸರಕಾರದ ನಿಲುವಿನಂತೆ  ನಡೆಯದಿರುವುದಕ್ಕಾಗಿ ಅವರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪರ ಮತಯಾಚಿಸಿದ ಲೂಸ್ ಮಾದ ಖ್ಯಾತಿಯ ನಟ ಯೋಗೇಶ್