ಆಫ್ರಿಕಾ : ವರ್ಣಬೇಧ ನೀತಿಯ ವಿರುದ್ದ ಹೋರಾಡಿದ ಪ್ರಖ್ಯಾತ ಹೋರಾಟಗಾರ ನೆಲ್ಸನ್ ಮಂಡೇಲ ಅವರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ಅವರು  ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲದವರಿಂದ ತಿಳಿದುಬಂದಿದೆ.
									
			
			 
 			
 
 			
					
			        							
								
																	
81ನೇ ವಯಸ್ಸಿನ ವಿನ್ನಿ ಅವರು ದೀರ್ಘಾಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ನಂತರ ಮೈತಪಟ್ಟಿದ್ದಾರೆ ಎಂದು ನೆಲ್ಸನ್ ಮಂಡೇಲಾ ಕುಟುಂಬದ ವಕ್ತಾರರಾದ ವಿಕ್ಟರ್ ಡ್ಲಾಮಿನಿ ತಿಳಿಸಿದ್ದಾರೆ.
									
										
								
																	
ಇವರು ತಮ್ಮ ಪತಿ ಜೈಲು ಶಿಕ್ಷೆ ಅನುಭವಿಸುವ ಅವಧಿಯಲ್ಲಿ ಅವರ ಬಿಡುಗಡೆಗಾಗಿ ಹಾಗೂ ದಕ್ಷಿಣ ಆಫ್ರಿಕಾದ ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಕಪ್ಪು ವರ್ಣೀಯರ ಪರ ಹೋರಾಟದಲ್ಲಿ ವಿನ್ನಿ ಅವರ  ಸ್ಥಾನ ಕೂಡ ಮಹತ್ವದ್ದು.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ