Select Your Language

Notifications

webdunia
webdunia
webdunia
webdunia

Myanmar Earthquake: ಕಟ್ಟಡದ ಅವಶೇಷಗಳೆಡೆಯಿಂದ ತಲೆ ಮಾತ್ರ ಹೊರಹಾಕಿ ಪ್ರಾಣಭಿಕ್ಷೆ ಬೇಡುತ್ತಿರುವ ಕಾರ್ಮಿಕನ ವಿಡಿಯೋ

Myanmar

Krishnaveni K

ಮ್ಯಾನ್ಮಾರ್ , ಶನಿವಾರ, 29 ಮಾರ್ಚ್ 2025 (15:35 IST)
Photo Credit: X
ಮ್ಯಾನ್ಮಾರ್: ಇಲ್ಲಿನ ಭೂಕಂಪದಲ್ಲಿ ಸಿಲುಕಿದವರ ಕತೆ ಒಬ್ಬೊಬ್ಬರದ್ದು ಒಂದೊಂದು ಎಂಬಂತಾಗಿದೆ. ಕಟ್ಟಡದ ನಡುವೆ ಸಿಲುಕಿದ ಕಾರ್ಮಿಕನೊಬ್ಬ ತಲೆ ಮಾತ್ರ ಹೊರ ಹಾಕಿ ಪ್ರಾಣಭಿಕ್ಷೆ ಬೇಡುತ್ತಿರುವ ಕರುಳು ಹಿಂಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮ್ಯಾನ್ಮಾರ್ ನಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 700 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಜನ ಕಟ್ಟಡಗಳ ಅವಶೇಷಗಳಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ. ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಕಾರ್ಮಿಕನೊಬ್ಬ ಬಿದ್ದ ಕಟ್ಟಡದ ಅವಶೇಷಗಳ ನಡುವೆ ಸಿಲುಕಿಕೊಂಡು ನೋವು ತಾಳಲಾರದೇ ಕಾಪಾಡುವಂತೆ ಅಂಗಲಾಚುತ್ತಿದ್ದಾನೆ. ಆತನ ಮನಕಲಕುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು, ಮ್ಯಾನ್ಮಾರ್ ಭೂಕಂಪ ಸಂತ್ರಸ್ತರಿಗೆ ಭಾರತ ಸಹಾಯ ಹಸ್ತ ಚಾಚಿದೆ. ಇದರ ಅಂಗವಾಗಿ ಭಾರತ ಅಗತ್ಯ ವಸ್ತುಗಳ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದು, ಇದು ಮ್ಯಾನ್ಮಾರ್ ಗೆ ಬಂದು ತಲುಪಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ ಯಡಿಯೂರಪ್ಪ ವಿರುದ್ಧ ಇನ್ನೂ ಧ್ವನಿ ಎತ್ತುತ್ತೇನೆ: ಬಸನಗೌಡ ಪಾಟೀಲ್ ಯತ್ನಾಳ್‌