Webdunia - Bharat's app for daily news and videos

Install App

ನೈಟ್‌ಕ್ಲಬ್‌ನಲ್ಲಿ ಹಾಟ್ ಮಾಡೆಲ್ ಮೇಲೆ ಲೈಂಗಿಕ ಕಿರುಕುಳ

ರಾಮಕೃಷ್ಣ ಪುರಾಣಿಕ
ಮಂಗಳವಾರ, 6 ಫೆಬ್ರವರಿ 2018 (19:39 IST)
ನೈಟ್‌ಕ್ಲಬ್‌ನಲ್ಲಿ ಸ್ವೀಡಿಷ್ ಮಾಡೆಲ್ ಮೇಲೆ ದಾಳಿ ಮಾಡಲಾಗಿದೆ, ಅವಳು ನಿರಾಕರಿಸಿದಾಗ ಕಾಮುಕನು ಅವಳನ್ನು ಎಳೆದಾಡಿದ್ದಾನೆ. ಈ ಘಟನೆಯು ವಿಕೋಪಕ್ಕೆ ಹೋದಾಗ, ಮಾಡೆಲ್‌ನ ಮುಖವನ್ನು ತೀವ್ರವಾಗಿ ರಕ್ತಸಿಕ್ತಗೊಳಿಸಲಾಗಿತ್ತು ಮತ್ತು ಘಟನೆಯ ಚಿತ್ರಗಳು ವೈರಲ್ ಆಗಿವೆ.
ಶನಿವಾರ ರಾತ್ರಿ ಈ ಘಟನೆಯು ನಡೆದಾಗ 19 ವರ್ಷದ ಸೋಫಿ ಜೋಹಾನ್ಸನ್ ಮಾಲ್ಮೋನಲ್ಲಿರುವ ಬಾಬೆಲ್‌ನಲ್ಲಿದ್ದಳು. ಡ್ಯಾನ್ಸ್ ಫ್ಲೋರ್ ಮೇಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅವಳ ಕೈಚೀಲವನ್ನು ಎಳೆದಿದ್ದಾನೆ ಮತ್ತು ಅವಳು ತಿರುಗಿ ನೋಡಿದಾಗ, ಅವಳ ಅಂಗಾಂಗಳನ್ನು ಮುಟ್ಟುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ. ಅವನು ಮುಂದುವರಿಯುವುದನ್ನು ಅವಳು ನಿರಾಕರಿಸಿದ ಕಾರಣ ಅವಳ ಮುಖದ ಮೇಲೆ ಅವನು ತೀವ್ರವಾಗಿ ಹೊಡೆದಿದ್ದಾನೆ.
 
ಹೆಚ್ಚಿನ ಅಪಾಯವನ್ನು ತಪ್ಪಿಸಲು ಮಿಸ್ ಜೋಹಾನ್ಸನ್ ಮತ್ತು ಅವಳ ಸ್ನೇಹಿತೆ ಕ್ಲಬ್ ತೊರೆಯಲು ನಿರ್ಧರಿಸುತ್ತಾರೆ ಆದರೆ ಅವರು ಅಲ್ಲಿಂದ ಬರುವಾಗ ಆ ವ್ಯಕ್ತಿಯು ಅವಳಿಗೆ ಬಾಟೆಲ್‌ನಿಂದ ತಲೆಗೆ ಹೊಡೆದಿರುವುದಾಗಿ ಹೇಳುತ್ತಾಳೆ. ಈ 19 ವರ್ಷ ವಯಸ್ಸಿನ ಹುಡುಗಿ ಅವಳ ಮುಖವು ಬಾಟಲಿಯಲ್ಲಿದ್ದ ದ್ರವದಿಂದ ಮುಚ್ಚಲಾಗಿತ್ತು ಎಂದು ಭಾವಿಸಿರುತ್ತಾಳೆ ಆದರೆ ಅವಳ ಗೆಳತಿ ಅದು ರಕ್ತ ಎಂಬುದನ್ನು ಖಚಿತಪಡಿಸುತ್ತಾಳೆ. "ನನಗೆ ಆಘಾತವಾಯಿತು" ಎಂದು ಅವಳು ಪತ್ರಿಕೆಗೆ ತಿಳಿಸಿದ್ದಾಳೆ.
 
ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಗಾಯಕ್ಕೆ ಹೆಚ್ಚಿನ ಹೊಲಿಗೆಗಳನ್ನು ಹಾಕಲಾಯಿತು. ಸುಮಾರು 25 ವರ್ಷ ವಯಸ್ಸಿನವನಾಗಿದ್ದ, 5-ಅಡಿ 7-ಇಂಚು, ಕಟ್ಟುಮಸ್ತಾದ ದೇಹರಚನೆಯನ್ನು ಹೊಂದಿದ್ದಾನೆ ಎಂದು ಜೋಹಾನ್ಸನ್ ವಿವರಿಸಿದ್ದಾಳೆ, ಅವಳು ವಿವರಿಸಿದ ವ್ಯಕ್ತಿಯನ್ನು ಪೊಲೀಸರು ಹುಡುಕುತಿದ್ದಾರೆ. "ಘಟನೆಯು ಇನ್ನೂ ತೀವ್ರ ವಿಕೋಪಕ್ಕೆ ಹೋಗಲಿಲ್ಲ ಎಂಬುದಕ್ಕೆ ನಾನು ಖುಷಿಯಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ. ಆದರೆ ಆ ವ್ಯಕ್ತಿಯನ್ನು ಇನ್ನೂ ಕಂಡುಹಿಡಿಯದೆ ಇರುವುದಕ್ಕೆ ಸ್ವಲ್ಪಮಟ್ಟಿಗೆ ನನಗೆ ಅಸಮಾಧಾನವಿದೆ" ಎಂದು ಜೋಹಾನ್ಸನ್ ವರದಿಗಾರರಿಗೆ ಹೇಳಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ಮುಂದಿನ ಸುದ್ದಿ