Select Your Language

Notifications

webdunia
webdunia
webdunia
Sunday, 13 April 2025
webdunia

ಪಶುವೈದ್ಯ ಮಾಡಿದ ಈ ಕೆಲಸದಿಂದ ಸಿಂಧ್ ಪ್ರಾಂತ್ಯದಲ್ಲಿ ಭಾರಿ ಪ್ರತಿಭಟನೆ

ಕರಾಚಿ
ಕರಾಚಿ , ಶುಕ್ರವಾರ, 31 ಮೇ 2019 (07:02 IST)
ಕರಾಚಿ : ಹಿಂದೂ ಸಮುದಾಯಕ್ಕೆ ಸೇರಿದ ಪಶುವೈದ್ಯರೊಬ್ಬರು ಮಾಡಿದ ಘನಕಾರ್ಯದಿಂದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.




ಮಿರ್‌ ಪುರ್ಕಾಸ್‌ ಜಿಲ್ಲೆಯ ಫುಲಾದ್ಯೊನ್‌ ಪಟ್ಟಣದ ಪಶುವೈದ್ಯ ರಮೇಶ್‌ ಕುಮಾರ್‌ ಎಂಬಾತ ಪವಿತ್ರ ಧರ್ಮಗ್ರಂಥದ ಹಾಳೆಗಳನ್ನು ಹರಿದು ಅದರಲ್ಲಿ ಔಷಧಗಳನ್ನು ಸುತ್ತಿಕೊಡುತ್ತಿದ್ದಾರೆ. ಇದರಿಂದ  ರೊಚ್ಚಿಗೆದ್ದ ಉದ್ರಿಕ್ತರ ಗುಂಪು ಹಿಂದು ಸಮುದಾಯದ ವ್ಯಾಪಾರಿಗಳ ಮಳಿಗೆಗಳಿಗೆ ಬೆಂಕಿ ಹಚ್ಚಿದೆ. ಇದರಿಂದ  ಹಲವು ವೈದ್ಯರ ಮಳಿಗೆಗಳು, ಔಷಧ ಅಂಗಡಿಗಳು ಕೂಡ ಸುಟ್ಟು ಭಸ್ಮವಾಗಿದೆ. ಟೈರ್‌ ಗಳನ್ನು ಸುಟ್ಟು ರಸ್ತೆಗಳಲ್ಲಿ ಸಂಚಾರ ತಡೆಯನ್ನುಂಟುಮಾಢಿದ್ದರು.


ಈ ಹಿನ್ನಲೆಯಲ್ಲಿ ಸ್ಥಳೀಯ ಮೌಲ್ವಿಯೊಬ್ಬರು ವೈದ್ಯರ ವಿರುದ್ಧ ಧರ್ಮನಿಂದನೆ ಆರೋಪ ಹೊರಿಸಿ ದೂರು ನೀಡಿದ್ದು, ಈ ದೂರಿನ್ವಯ ವೈದ್ಯ ರಮೇಶ್‌ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಧರ್ಮನಿಂದನೆ ಕಾನೂನಿನ ಪ್ರಕಾರ ಇಸ್ಲಾಮ್‌ ಧರ್ಮಕ್ಕೆ  ಅಗೌರವ ತೋರಿದವರನ್ನು ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅನಗತ್ಯ ಕರೆ, ಮೆಸೇಜ್ ನಿಂದ ಗ್ರಾಹಕರನ್ನು ಮುಕ್ತಗೊಳಿಸಲು ಟೆಲಿಕಾಂ ಸಂಸ್ಥೆಗಳು ಜಾರಿಗೆ ತರಲಿವೆ ಈ ತಂತ್ರಜ್ಞಾನ