Select Your Language

Notifications

webdunia
webdunia
webdunia
Saturday, 12 April 2025
webdunia

ಟೀಂ ಇಂಡಿಯಾ ವಿರುದ್ಧ ಪಂದ್ಯ ಮುಗಿಯುವವರೆಗೂ ಪಾಕ್ ಆಟಗಾರರು ಪತ್ನಿ ಮುಖ ನೋಡೋ ಹಂಗಿಲ್ಲ!

ಪಾಕಿಸ್ತಾನ ಕ್ರಿಕೆಟ್
ಲಂಡನ್ , ಭಾನುವಾರ, 26 ಮೇ 2019 (09:11 IST)
ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳಿಗೂ ಆಯಾ ಕ್ರಿಕೆಟ್ ಸಂಸ್ಥೆ ತಮ್ಮದೇ ಆದ ಕಟ್ಟುನಿಟ್ಟಿನ ನಿಯಮ ರೂಪಿಸಿದೆ.


ಭಾರತದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡಾ ತನ್ನ ಕ್ರಿಕೆಟಿಗರಿಗೆ ಪತ್ನಿಯರನ್ನು ಜತೆಗೆ ಕರೆದೊಯ್ಯಲು ಕೆಲವು ನಿಬಂಧನೆ ವಿಧಿಸಿದೆ. ಪಾಕ್ ಕ್ರಿಕೆಟಿಗರು ಟೂರ್ನಮೆಂಟ್ ವೇಳೆ ಪತ್ನಿಯನ್ನು ಕರೆದೊಯ್ಯಬಹುದು. ಆದರೆ ಭಾರತದ ವಿರುದ್ಧದ ಪಂದ್ಯ ಮುಗಿದ ಮೇಲಷ್ಟೇ ಕರೆದೊಯ್ಯಬಹುದು ಎಂದು ನಿಬಂಧನೆ ವಿಧಿಸಿದೆ.

ಆದರೆ ಎರಡು ವರ್ಷದ ಪುತ್ರಿಯನ್ನು ಕಳೆದುಕೊಂಡ ದುಃಖದಲ್ಲಿರುವ ಆಸಿಫ್ ಅಲಿ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಹ್ಯಾರಿಸ್ ಸೊಹೈಲ್ ಗೆ ಮಾತ್ರ ಈ ನಿಯಮ ಅನ್ವಯಿಸುವುದಿಲ್ಲ. ಜೂನ್ 16 ರಂದು ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಎದುರಾಗಲಿದ್ದು, ಇಡೀ ವಿಶ್ವವೇ ಈ ಪಂದ್ಯಕ್ಕಾಗಿ ಎದುರು ನೋಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾನು ನಾಯಕನಾದರೂ ಕೊಹ್ಲಿ ಯಾಕೆ ಧೋನಿಯನ್ನೇ ಫೀಲ್ಡಿಂಗ್ ಸೆಟ್ ಮಾಡಲು ಹೇಳುತ್ತಾರೆ ಗೊತ್ತಾ?