Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಶಾಕ್! ಅಭ್ಯಾಸ ಮಾಡುವಾಗ ಗಾಯಗೊಂಡ ಪ್ರಮುಖ ಕ್ರಿಕೆಟಿಗ

ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾಗೆ ಶಾಕ್! ಅಭ್ಯಾಸ ಮಾಡುವಾಗ ಗಾಯಗೊಂಡ ಪ್ರಮುಖ ಕ್ರಿಕೆಟಿಗ
ಮುಂಬೈ , ಶನಿವಾರ, 25 ಮೇ 2019 (08:17 IST)
ಮುಂಬೈ: ವಿಶ್ವಕಪ್ ಗೆ ಬೆರಳೆಣಿಕೆಯ ದಿನಗಳು ಬಾಕಿಯಿರುವಾಗ ಟೀಂ ಇಂಡಿಯಾ ಕ್ರಿಕೆಟಿಗ ವಿಜಯ್ ಶಂಕರ್ ರೂಪದಲ್ಲಿ ಶಾಕ್ ಸಿಕ್ಕಿದೆ.


ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಆಲ್ ರೌಂಡರ್ ವಿಜಯ್ ಶಂಕರ್ ಬಲಗೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ. ನಂತರ ಸಹಾಯಕ ಸಿಬ್ಬಂದಿಗಳ ಸಹಾಯದಿಂದ ವಿಜಯ್ ಪೆವಿಲಿಯನ್ ಗೆ ಮರಳಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಜಯ್ ಶಂಕರ್ ಗಾಯದ ಬಗ್ಗೆ ತಂಡದಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ. ಇಂತಹ ಸ್ಥಿತಿಯಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಅಂಗಣದಲ್ಲಿ ಯುವಿ-ಕೈಫ್ ಜೋಡಿ ಫೋಟೋ ನೋಡಿ ಬೆಚ್ಚಿಬಿದ್ದ ನಾಸಿರ್ ಹುಸೇನ್