Select Your Language

Notifications

webdunia
webdunia
webdunia
webdunia

ಆಹಾರದ ಮೂಲಕ ದೇಹ ಸೇರಿಕೊಂಡ ಕಲ್ಲುಗಳನ್ನು ಹೊರಹಾಕಲು ಈ ಹಣ್ಣನ್ನು ಸೇವಿಸಿ

ಆಹಾರದ ಮೂಲಕ ದೇಹ ಸೇರಿಕೊಂಡ ಕಲ್ಲುಗಳನ್ನು ಹೊರಹಾಕಲು ಈ ಹಣ್ಣನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 28 ಮೇ 2019 (09:00 IST)
ಬೆಂಗಳೂರು : ಬೆಟ್ಟ ಗುಡ್ಡಗಳಲ್ಲಿ ಕಂಡುಬರುವ ನೇರಳೆಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ, ಹಲವು ರೋಗಗಳನ್ನು ಗುಣಪಡಿಸುವ ದಿವ್ಯ ಔಷಧ ಕೂಡ ಹೌದು. ಇದನ್ನು ಸೇವಿಸುವುದರಿಂದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು. Antibacterial ಸಮರ್ಥ ವಾಗಿರುವ ಈ ಹಣ್ಣಿನನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಶಕ್ತಿ, ಪುಷ್ಟಿ ಹಾಗು ರೋಗ ನಿರೋಧಕ ಶಕ್ತಿಯನ್ನ ನೀಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.




ನೀವು ತಿನ್ನುವ ಆಹಾರದಲ್ಲಿದ್ದ ಸಣ್ಣ ಕಲ್ಲಿನ ಪುಡಿಗಳು ನಿಮ್ಮ ದೇಹವನ್ನು ಸೇರಿದ್ದರೆ ಅದನ್ನು ಹೊರಹಾಕಲು ಈ ಹಣ್ಣನ್ನು ಸೇವನೆ ಮಾಡಿ. ಹಾಗೇ ಹೃದಯದಲ್ಲಿ ಕಲ್ಮಶಗಳನ್ನ ಸಹ ಈ ಹಣ್ಣು ಶುದ್ಧ ಮಾಡಿ ಹೃದಯದ ಕಾರ್ಯ ಕ್ಷಮತೆಯನ್ನ ಹೆಚ್ಚಿಸುತ್ತದೆ.


ಜ್ವರ ಬಂದಾಗ ನೇರಳೆ ಹಣ್ಣಿನ ಜ್ಯೂಸ್ ನಲ್ಲಿ ಸ್ವಲ್ಪ ದನಿಯಪುಡಿ ಮಿಶ್ರಣ ಮಾಡಿಕೊಂಡು ತಿನ್ನೋದ್ರಿಂದ ಶರೀರದ ತಾಪ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಮೂತ್ರದ ಉರಿ ಸಮಸ್ಯೆ ಇದ್ದಾಗ ಒಂದು ಲೋಟ ನೀರಿನಲ್ಲಿ ಮೂರು ಚಮಚ ನೇರಳೆ ರಸ ಹಾಗು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಶಮನವಾಗುತ್ತದೆ.


ಈ ಹಣ್ಣು ಸಕ್ಕರೆ ಕಾಯಿಲೆ ಸಮಸ್ಯೆ ಇದ್ದವರಿಗೆ ಮಾತ್ರೆಗಳ ಅವಶ್ಯಕತೆಯನ್ನ ಕಡಿಮೆ ಮಾಡುತ್ತದೆ, ಇವುಗಳಲ್ಲಿ glycemic index ಅಂಶಗಳು ಹೆಚ್ಚಿರುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆಯಲ್ಲಿನ ಪೊಟಾಶಿಯಂ ರಕ್ತದ ಒತ್ತಡವನ್ನ ತಗ್ಗಿಸುತ್ತದೆ, ನೇರಳೆಯ ಹಣ್ಣನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತುಗಳು ಸಹ ಸಾಯುತ್ತದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ