Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ಒಣಗಿಸಬೇಡಿ. ಯಾಕೆ ಗೊತ್ತಾ?

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ಒಣಗಿಸಬೇಡಿ. ಯಾಕೆ ಗೊತ್ತಾ?
ಬೆಂಗಳೂರು , ಶುಕ್ರವಾರ, 24 ಮೇ 2019 (09:02 IST)
ಬೆಂಗಳೂರು : ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಹೊರಗೆ ಒಣಗಿಸಲು ಆಗುವುದಿಲ್ಲ. ಇದರಿಂದ ಬಟ್ಟೆ ಸರಿಯಾಗಿ ಒಣಗದೆ  ವಾಸನೆ ಬರುತ್ತದೆ. ಆಗ ಬಟ್ಟೆಯನ್ನು ಮನೆಯ ಒಳಾಂಗಣದಲ್ಲಿ ಒಣಗಿಸುತ್ತಾರೆ. ಈ ರೀತಿ ಯಾವುದೇ ಕಾರಣಕ್ಕೂ ಮಾಡಬೇಡಿ.




ಯಾಕೆಂದರೆ ತೇವಾಂಶದಿಂದ ಕೂಡಿರುವ ಬಟ್ಟೆಯನ್ನು ಮನೆಯ ಒಳಾಂಗಣದಲ್ಲಿ ಒಣಗಿಸುವುದರಿಂದ ಅನೇಕ ಬ್ಯಾಕ್ಟೀರಿಯಾಗಳು ಉತ್ಪತಿಯಾಗುತ್ತದೆ. ಬಟ್ಟೆಗಳು ಕೆಟ್ಟ ವಾಸನೆ ಬೀರುತ್ತಿದ್ದರೆ ಅಂತಹ ಕೋಣೆಯಲ್ಲಿ ಅಸ್ತಮಾ ರೋಗಿಗಳು ವಾಸಿಸುವುದು ತುಂಬಾ ಅಪಾಯಕಾರಿ. ಅಷ್ಟೇ ಅಲ್ಲದೆ ನವಜಾತ ಶಿಶುಗಳು ಇರುವ ಮನೆಯ  ಒಳಾಂಗಣದಲ್ಲಿ  ಬಟ್ಟೆ ಒಣಗಿಸಿದರೆ ಶಿಶುವಿಗೆ ಅನಾರೋಗ್ಯದ ಸಮಸ್ಯೆ ಎದುರಾಗುತ್ತದೆ.


ಮನೆಯಲ್ಲಿ ಒಣ ಹಾಕಿದ ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಬಟ್ಟೆಯ ಮೂಲಕ ದೇಹದ ಒಳ ಪ್ರವೇಶಿಸುತ್ತದೆ. ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಮಳೆಗಾಲದಲ್ಲಿ ಸೋಂಕಿಗೆ ಒಳಗಾಗುತ್ತೀರಿ. ಅಲ್ಲದೇ ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಚರ್ಮ ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಇದರಿಂದ ಶೀತದ ಸಮಸ್ಯೆ ಕಂಡು ಬರುತ್ತದೆ. ಮಳೆಗಾಲದಲ್ಲಿ ಬಟ್ಟೆಯನ್ನು ಸಾಧ್ಯವಾದಷ್ಟು ವಾಷಿಂಗ್ ಮಿಷಿನ್​ನಲ್ಲಿ ಡ್ರೈ ಮಾಡಿ ಅಥವಾ ಗಾಳಿ ಇರುವ ಸ್ಥಳದಲ್ಲಿ ಒಣಗಲು ಹಾಕಿ. ಬಟ್ಟೆಯನ್ನು ಬಳಸುವ ಮೊದಲು ಚೆನ್ನಾಗಿ ಇಸ್ತ್ರಿ ಮಾಡಿ ಧರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸೀಕ್ರೆಟ್ ಗಳನ್ನು ಪತ್ನಿಯರು ತಪ್ಪಿಯೂ ಪತಿಯ ಬಳಿ ಹೇಳಲ್ಲ!