Publish Date: Fri, 24 May 2019 (07:10 IST)
Updated Date: Fri, 24 May 2019 (07:12 IST)
ಬೆಂಗಳೂರು: ಗುಟ್ಟು ಮಾಡುವುದರಲ್ಲಿ, ಗುಟ್ಟು ರಟ್ಟು ಮಾಡುವುದರಲ್ಲಿ ಹೆಣ್ಣು ಮಕ್ಕಳು ಹುಷಾರು ಎಂದು ಮಾತಿದೆ. ಆದರೆ ಹೆಣ್ಣು ಮಕ್ಕಳು ಕೆಲವೊಂದು ಕಹಿ ಸತ್ಯಗಳನ್ನು ತಪ್ಪಿಯೂ ತಮ್ಮ ಗಂಡನ ಬಳಿ ಹೇಳಿಕೊಳ್ಳಲ್ಲ. ಅವು ಯಾವುವು ಗೊತ್ತಾ?
ಹಳೇ ಬಾಯ್ ಫ್ರೆಂಡ್ ವಿಚಾರ
ಹಳೇ ಸಂಬಂಧಗಳು, ಬಾಯ್ ಫ್ರೆಂಡ್ ಗಳ ವಿಚಾರವನ್ನು ಪತ್ನಿಯರು ಗಂಡಂದಿರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಗಂಡ ಇದನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ ಅವರಿಗೆ ಇದ್ದೇ ಇರುತ್ತದೆ.
ಅತ್ತೆ ಮಾವನ ವಿಚಾರ
ಕೆಲವೊಮ್ಮೆ ಗಂಡನಿಗೆ ಬೇಕಾಗಿಯಾದರೂ ಅತ್ತೆ ಮಾವನ ಮೇಲೆ ಅತಿಯಾದ ಪ್ರೀತಿ ನಟಿಸುವ ಪತ್ನಿಯರಿರುತ್ತಾರೆ. ಗಂಡನಿಗೆ ಬೇಜಾರಾಗಬಾರದು ಎಂಬ ಮಾತ್ರಕ್ಕೋ, ಸಂಬಂಧ ಹಾಳಾಗಬಾರದು ಎಂಬ ಮಾತ್ರಕ್ಕೋ ನಿಮ್ಮ ಅಪ್ಪ-ಅಮ್ಮ ನನಗೂ ಇಷ್ಟ ಎಂದು ಸುಳ್ಳು ಹೇಳುತ್ತಾರೆ.
ತೌರಿನ ವಿಚಾರ
ಗಂಡ ಎಷ್ಟೇ ಒಳ್ಳೆಯವನಾಗಿದ್ದರೂ ಹೆಣ್ಣು ಮಕ್ಕಳು ತೌರಿನ ವಿಚಾರವನ್ನು ಗಂಡನ ಮನೆಯಲ್ಲಿ ಬಿಟ್ಟುಕೊಡಲ್ಲ. ತವರಿನ ಮನೆಯ ಗುಟ್ಟುಗಳನ್ನು ರಟ್ಟು ಮಾಡಲ್ಲ. ಅದೇ ರೀತಿ ಗಂಡನ ಮನೆ ವಿಚಾರವನ್ನೂ ತವರಿನಲ್ಲಿ ಅಷ್ಟು ಸುಲಭದಲ್ಲಿ ಬಿಟ್ಟುಕೊಡಲ್ಲ.
ಬಚ್ಚಿಟ್ಟ ಹಣ
ಈಗಿನ ಕಾಲದಲ್ಲಿ ಎಲ್ಲಾ ಹೆಣ್ಣು ಮಕ್ಕಳೂ ಸ್ವಾವಲಂಬಿಗಳೇ. ಹಣಕ್ಕಾಗಿ ಗಂಡನ ಎದುರು ಕೈ ಜೋಡಿಸುವ ಪರಿಸ್ಥಿತಿಯಿಲ್ಲ. ಹಾಗಿದ್ದರೂ ಗಂಡನಿಗೆ ಗೊತ್ತಿಲ್ಲದಂತೆ ಸಣ್ಣ ಪುಟ್ಟ ಉಳಿತಾಯ, ಕೂಡಿಡುವ ಪರಿಪಾಠ ಹೆಣ್ಣು ಮಕ್ಕಳಿಗಿದ್ದೇ ಇರುತ್ತದೆ. ಕೆಲವೊಮ್ಮೆ ಕಷ್ಟ ಬಂದಾಗ ಇದುವೇ ಸಹಾಯಕ್ಕೆ ಬರುವುದು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ