Select Your Language

Notifications

webdunia
webdunia
webdunia
webdunia

ತುಳಸಿ ಗಿಡವಿದ್ದ ಕುಂಡದಲ್ಲಿ ಮತ್ತೊಂದು ಗಿಡ ತನ್ನಷ್ಟಕ್ಕೆ ಬೆಳೆದರೆ ಏನರ್ಥ ಗೊತ್ತಾ?

ತುಳಸಿ ಗಿಡವಿದ್ದ ಕುಂಡದಲ್ಲಿ ಮತ್ತೊಂದು ಗಿಡ ತನ್ನಷ್ಟಕ್ಕೆ ಬೆಳೆದರೆ ಏನರ್ಥ ಗೊತ್ತಾ?
ಬೆಂಗಳೂರು , ಶನಿವಾರ, 18 ಮೇ 2019 (09:37 IST)
ಬೆಂಗಳೂರು : ತುಳಸಿ ಗಿಡ ಹಲವು ರೋಗಗಳಿಗೆ ರಾಮಬಾಣ. ಇದು ನಮ್ಮ ಆರೋಗ್ಯವನ್ನು ಕಾಪಾಡಲು ಉತ್ತಮ ಔಷಧಿ. ಅದೇರೀತಿ ಇದು ನಮ್ಮ ಮನೆಯವರಿಗೆ ಮುಂದೆ ಆಗುವ ಒಳಿತು ಕೆಡುಕುಗಳ ಬಗ್ಗೆ ತಿಳಿಸುವಲ್ಲಿ ಕೂಡ ಸಹಾಯ ಮಾಡುತ್ತದೆ.




* ದಿನಾಲೂ ನೀರು ಹಾಕಿ ಚೆನ್ನಾಗಿ ಪೋಷಿಸುತ್ತಿದ್ದರೂ, ತುಳಸಿ ಗಿಡದ ಎಲೆಗಳು ಒಣಗಿಹೋಗುತ್ತಿದ್ದರೆ…. ಆ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗುತ್ತರಂತೆ. ಯಾವುದಾದರೂ ಒಂದು ಗಂಭೀರ ಕಾಯಿಲೆಗೆ ತುತ್ತಾಗುವ ಅವಕಾಶವಿರುತ್ತದಂತೆ.


* ತುಳಸಿ ಗಿಡ ಹಚ್ಚ ಹಸಿರಾಗಿರುವ ಮನೆಯಲ್ಲಿ ಯಾವಾಗಲೂ ಸುಖ ಸಂತೋಷಗಳು ತುಂಬಿ ತುಳುಕಾಡುತ್ತಿರುತ್ತವಂತೆ.ಅಂತಹ ಮನೆಯವರಿಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ.


* ತುಳಸಿ ಗಿಡದ ಎಲೆಗಳ ಬಣ್ಣ ಒಮ್ಮೆಲೇ ಬದಲಾದರೆ… ಆ ಮನೆಯ ಪೈಕಿ ಯಾರೋ ಒಬ್ಬರು ಮಾಯ ಮಾಟದಂತಹ ಪ್ರಯೋಗಕ್ಕೆ ಈಡಾಗುತ್ತಾರೆಂಬುದನ್ನು ಸೂಚಿಸುತ್ತದೆ. ಹೀಗೆ ಪ್ರಯೋಗ ನಡೆಸಿ ಅವರನ್ನು ಹಾಳು ಮಾಡಬೇಕೆಂದುಕೊಂಡರೆ ಮಾತ್ರ ಈ ರೀತಿ ಎಲೆಗಳ ಬಣ್ಣ ಬದಲಾಗುತ್ತದಂತೆ.


* ತುಳಸಿ ಗಿಡವನ್ನು ಬೆಳೆಸುತ್ತಿರುವ ಕುಂಡದಲ್ಲಿ, ಮತ್ತೊಂದು ಸಸಿ ತನ್ನಷ್ಟಕ್ಕೆ ತಾನೇ ಹುಟ್ಟಿದರೆ,ತಾವು ಅಂದುಕೊಂಡದ್ದನ್ನು ಸಾಧಿಸುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



.
 

Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?