ಪ್ರೇಮಿಗಳು ಹಿಂಗೂ ಇರ್ತಾರ...!
ಸತ್ತ ಪ್ರೇಮಿಯ ವೀರ್ಯ ಬಳಸಿ ಗರ್ಭವತಿಯಾದ ಪ್ರೇಯಸಿ
ಕ್ವೀನ್ಸ್ ಲ್ಯಾಂಡ್: ಗರ್ಭಧಾರಣೆಯ ಬಗ್ಗೆ ಭಾನುವಾರ ಹಂಚಿಕೊಂಡ ಎಲಿಡಿ, ಬುಬ್ಬಾ ಚಂಪ್ ಅಕ್ಟೋಬರ್ ತಿಂಗಳಲ್ಲಿ ಪ್ರಪಂಚಕ್ಕೆ ಬರಲಿದೆ. ನಾನು ಮತ್ತು ನಿಮ್ಮ ತಂದೆ ನಿನ್ನ ಬಗ್ಗೆ ಬಹಳಷ್ಟು ಕನಸು ಕಂಡಿದ್ದೆವು. ಆದರೆ ಇದರ ನಡುವೆ ದುರಂತ ನಡೆದು ಹೋಗಿದೆ.
ಒಲಂಪಿಕ್ನ ಸ್ನೋಬೋರ್ಡ್ ಚಾಂಪಿಯನ್ ಪತ್ನಿ ಐವಿಎಫ್ ಮೂಲಕ ಗರ್ಭವತಿಯಾಗಿರುವ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.ಎಲಿಡಿ ವ್ಲಗ್, ಆಸ್ಟ್ರೇಲಿಯದ ಸ್ನೋಬೋರ್ಡ್ ಚಾಂಪಿಯನ್ ಅಲೆಕ್ಸ್ ಪುಲಿನ್ನ ಪತ್ನಿ. ಈಕೆ ಅಲೆಕ್ಸ್ ಸಾವನ್ನಪ್ಪಿದ 12 ತಿಂಗಳ ನಂತರ ಗರ್ಭಧರಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಕ್ವೀನ್ಸ್ಲ್ಯಾಂಡ್ನಲ್ಲಿರುವ ಗೋಲ್ಡ್ ಕೋಸ್ಟ್ನ ಪಾಮ್ ಬೀಚ್ನ ಕೃತಕ ಬಂಡೆಯ ಉದ್ದಕ್ಕೂ ಈಟಿಯಲ್ಲಿ ಮೀನು ಹಿಡಿಯುವಾಗ ಪುಲಿನ್ ನಿಧನರಾದರು. ಆಗ ತನ್ನ ದಿವಂಗತ ಪಾಲುದಾರ ಅಲೆಕ್ಸ್ 'ಚಂಪಿ' ಪುಲಿನ್ ಅವರ ವೀರ್ಯವನ್ನು ಹಿಂಪಡೆಯುವ ಬಗ್ಗೆ ಎಲಿಡಿ ವ್ಲಗ್ ಮಾತನಾಡಿದ್ದರು.
ಗರ್ಭಧಾರಣೆಯ ಬಗ್ಗೆ ಭಾನುವಾರ ಹಂಚಿಕೊಂಡ ಎಲಿಡಿ, ಬುಬ್ಬಾ ಚಂಪ್ ಅಕ್ಟೋಬರ್ ತಿಂಗಳಲ್ಲಿ ಪ್ರಪಂಚಕ್ಕೆ ಬರಲಿದೆ. ನಾನು ಮತ್ತು ನಿಮ್ಮ ತಂದೆ ನಿನ್ನ ಬಗ್ಗೆ ಬಹಳಷ್ಟು ಕನಸು ಕಂಡಿದ್ದೆವು. ಆದರೆ ಇದರ ನಡುವೆ ದುರಂತ ನಡೆದು ಹೋಗಿದೆ. ಇಂತಹ ಸಂದರ್ಭದ ನಡುವೆಯೂ ನಿನ್ನನ್ನು ಜಗತ್ತಿಗೆ ಸ್ವಾಗತಿಸಲು ನಾನು ಕಾತುರಳಾಗಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ಪ್ರೀತಿಯ ಅಲೆಕ್ಸ್ ಪುಲಿನ್ ಸಾವನ್ನಪ್ಪಿದ ತಿಂಗಳು ನಾನು ಗರ್ಭಿಣಿಯಾಗುತ್ತೇನೆ ಎಂದು ಭಾವಿಸಿದ್ದೆ. ಇದಕ್ಕಾಗಿ ನಾವಿಬ್ಬರು ಪ್ರಯತ್ನಿಸುತ್ತಿದ್ದೆವು. ಐವಿಎಫ್ ಎಂಬುದೊಂದು ನಮ್ಮ ಬಳಿ ಇತ್ತು. ಆದರೆ ನಾನು ಇದನ್ನು ಬಳಸುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಬೇರೆಯವರಂತೆ ನನ್ನ ಬದುಕಿನಲ್ಲಿ ಸಿಹಿ, ಕಹಿ ತುಂಬಿದೆ. ನನ್ನ ಇಡೀ ಜೀವನದಲ್ಲಿ ಎಂದಿಗೂ ಹೆಚ್ಚು ಉತ್ಸುಕಳಾಗಿರಲಿಲ್ಲ.
ಕ್ವೀನ್ಸ್ ಲ್ಯಾಂಡ್ನ ಕಾನೂನಿನ ಪ್ರಕಾರ, ಮೃತ ವ್ಯಕ್ತಿಯ ಕುಟುಂಬದ ಒಪ್ಪಿಗೆಯ ನಂತರ ಮೃತ ವ್ಯಕ್ತಿಯ ಮರಣೋತ್ತರ ವೀರ್ಯವನ್ನು ತೆಗೆದುಹಾಕಬಹುದು. ಆದರೆ ವೀರ್ಯವನ್ನು ತೆಗೆದುಹಾಕಲು ಕುಟುಂಬದ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಬಳಿಕ ಐವಿಎಫ್ ತಜ್ಞರು ವೀರ್ಯ ಮರುಪಡೆಯುವಿಕೆಗೆ ಸಹಾಯ ಮಾಡುತ್ತಾರೆ. ಅಲೆಕ್ಸ್ ಪುಲಿನ್ ಅವರ ವೀರ್ಯವನ್ನು ತೆಗೆದುಹಾಕಲು 24 ರಿಂದ 36 ಗಂಟೆಗಳನ್ನು ತೆಗೆದುಕೊಂಡಿತು ಎಂದು ಆ ಅವಧಿಯ ಘಟನೆಯನ್ನು ವಿವರಿಸಿದ್ದಾರೆ. ಆಕೆ ಗರ್ಭಿಯಾಗಿರುವ ಬಗ್ಗೆ ಹಲವಾರು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.
ಪುಲ್ಲಿನ್ನ ದುರಂತ ಸಾವು?
ಡ್ಯುಯಲ್ ವರ್ಲ್ಡ್ ಚಾಂಪಿಯನ್ ಸ್ನೋಬೋರ್ಡರ್ ಮತ್ತು ವಿಂಟರ್ ಒಲಿಂಪಿಕ್ಸ್ ತಾರೆ ಪುಲ್ಲಿನ್ ಅವರ ಸಾವು ಕ್ರೀಡಾ ಸಮುದಾಯಕ್ಕೆ ದೊಡ್ಡ ಶಾಕ್ ತೊಂದೊಡ್ಡಿತು. ಪುಲ್ಲಿನ್ನ್ನು ನೀರಿನಿಂದ ಹೊರತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರಿಗೆ ಪ್ರಜ್ಞೆ ಭರಿಸಲು ವೈದ್ಯರು 45 ನಿಮಿಷಗಳ ಕಾಲ ಶ್ರಮವಹಿಸಿದ್ದರು.
"ಅವರು ಡೈವ್ಗೆ ಹೋಗುವ ಬಗ್ಗೆ ನನಗೆ ತಿಳಿಸಿದ್ದರು. ಈ ವೇಳೆ, ನಾನು ನಿನ್ನನ್ನು ಪ್ರೀತಿಸುತ್ತೇನೆ, ಶಾರ್ಕ್ಗಳಿಗಾಗಿ ಗಮನಹರಿಸುತ್ತೇನೆ ಎಂದು ಹೇಳಿದ್ದರು ಎಂಬುದಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದರು.
ಪುಲ್ಲಿನ್ಗೆ ಕುಟುಂಬವೇ ಪ್ರಪಂಚ. ನಾನು, ಮತ್ತು ಅವನ ಸಹೋದರಿ ಮತ್ತು ಪೋಷಕರು ಮತ್ತು (ನಾಯಿ) ರುಮ್ಮಿ ಅವರ ಜಗತ್ತಾಗಿತ್ತು. ಆತನಿಲ್ಲದೆ ನಾನು ಏನು ಮಾಡುತ್ತೇನೆ, ಹೇಗೆ ಇರುತ್ತೇನೆಂಬುದು ನನಗೆ ತಿಳಿದಿಲ್ಲ ಎಂದು ಭಾವುಕರಾಗಿದ್ದರು.ನನ್ನ ಜೀವನವನ್ನು ಕೊನೆಯವರೆಗೂ ಕಳೆಯುತ್ತೇನೆ ಎಂಬುದೇ ನನಗೆ ಖುಷಿ. ಆದರೆ ಇಷ್ಟು ಬೇಗ ದುರಂತ ಅಂತ್ಯ ಕಂಡಿದ್ದು ಬೇಸರ ತಂದಿದೆ ಎಂದು ಹೇಳಿದರು. ಪುಲ್ಲಿನ್ ರಷ್ಯಾದಲ್ಲಿ 2014ರಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಆಸ್ಟ್ರೇಲಿಯದ ಪತಾಕೆಯನ್ನು ಹಾರಿಸಿದ್ದರು. 2011 ಮತ್ತು 2013ರಲ್ಲಿ ಜಾಗತಿಕ ಚಾಂಪಿಯನ್ ಶಿಪ್ ಬಿರುದನ್ನು ತಮ್ಮದಾಗಿಸಿಕೊಂಡಿದ್ದರು ಮತ್ತು 9 ವಿಶ್ವಕಪ್ ಬಂಗಾರದ ಪದಕ ಪಡೆದಿದ್ದರು