Publish Date: Wed, 25 Oct 2017 (08:38 IST)
Updated Date: Wed, 25 Oct 2017 (08:44 IST)
ನವದೆಹಲಿ: ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ! ಆದರೆ ನಿಷೇಧವಾಗುತ್ತಿರುವುದು ಮನೆ ಬಳಕೆಯಿಂದಲ್ಲ. ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಬ್ಯಾಗ್ ಗಳಲ್ಲಿ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದಕ್ಕೆ ಕತ್ತರಿ ಬೀಳಲಿದೆಯಂತೆ.
ಇದಕ್ಕೆಲ್ಲಾ ಕಾರಣ ಸ್ಮಾರ್ಟ್ ಫೋನ್ ಗಳು ಸಿಡಿದು ಅನಾಹುತವಾಗುತ್ತಿರುವುದು. ಈ ಕಾರಣಕ್ಕೆ ಲ್ಯಾಪ್ ಟಾಪ್ ಗಳನ್ನೂ ಚೆಕ್ ಇನ್ ಬ್ಯಾಗ್ ನಲ್ಲಿ ಇರಿಸದಂತೆ ನಿಷೇಧ ಹೇರಲು ಅಮೆರಿಕಾದ ವಿಮಾನ ಯಾನ ಸಂಸ್ಥೆ ಚಿಂತನೆ ನಡೆಸದೆಯಂತೆ.
ಲ್ಯಾಪ್ ಟಾಪ್ ನಲ್ಲಿ ಕೂಡಾ ಸ್ಮಾರ್ಟ್ ಫೋನ್ ಗಳಂತೆ ಚಾರ್ಜ್ ಮಾಡಬಲ್ಲ ಲಿಥಿಯಂ ಬ್ಯಾಟರಿ ಇರುವುದರಿಂದ ಕೆಲವು ಬಾರಿ ಸಿಡಿದು ವಿಮಾನದಲ್ಲಿ ಬೆಂಕಿ ತಗಲುವ ಅಪಾಯಗಳಾಗುವ ಸಾಧ್ಯತೆಯಿರುತ್ತದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಭಾರತದಲ್ಲೂ ಇದು ಅನ್ವಯವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ