Select Your Language

Notifications

webdunia
webdunia
webdunia
webdunia

ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ ನೆರವು

ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ  ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ  ನೆರವು
ನವದೆಹಲಿ , ಗುರುವಾರ, 12 ಅಕ್ಟೋಬರ್ 2017 (08:37 IST)
ನವದೆಹಲಿ: ವಿದೇಶದಲ್ಲಿರುವ ಭಾರತೀಯರಿಗೆ ಅಥವಾ ಭಾರತದಲ್ಲಿ ಸಂಕಷ್ಟದಲ್ಲಿರುವ ವಿದೇಶಿಯರಿಗೆ ನೆರವು ನೀಡುವುದರಲ್ಲಿ ಸದಾ ಮುಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಅಂತಹದ್ದೇ ಮಾನವೀಯತೆ ಮೆರೆದಿದ್ದಾರೆ.

 
ಭಾರತ ಪ್ರವಾಸಕ್ಕೆ ಬಂದ ರಷ್ಯಾ ಯುವಕ ಇವಾಂಜೆಲಿನ್ ಮರಳಲು ಸಾಕಷ್ಟು ಹಣವಿಲ್ಲದೇ ತಮಿಳುನಾಡಿನ ದೇವಾಲಯದ ಎದುರು ಭಿಕ್ಷಾಟನೆ ಮಾಡುತ್ತಿದ್ದ. ಸೆಪ್ಟೆಂಬರ್ 24 ರಂದು ಭಾರತಕ್ಕೆ ಬಂದಿದ್ದ ಇವಾಂಜೆಲಿನ್ ಎಟಿಎಂ ಪಿನ್ ಅಕಸ್ಮಾತ್ತಾಗಿ ಲಾಕ್ ಆಗಿತ್ತು.

ಇದರಿಂದಾಗಿ ಹಣವಿಲ್ಲದೇ ಈತ ದೇವಾಲಯದ ಎದುರು ಭಿಕ್ಷಾಟನೆಗೆ ಕೂತಿದ್ದ. ಈ ವಿಷಯಕ್ಕೆ ಗಮನಕ್ಕೆ ಬಂದ ತಕ್ಷಣ ಆತನ ನೆರವಿಗೆ ಬಂದ ಸಚಿವೆ ಸುಷ್ಮಾ ತಮಿಳುನಾಡಿನಲ್ಲಿರುವ ಅಧಿಕಾರಿಗಳಿಗೆ ತಕ್ಕ ನೆರವು ನೀಡಲು ಸೂಚಿಸಿದ್ದಾರೆ. ನಿಮ್ಮ ರಷ್ಯಾ ನಮ್ಮ ಸ್ನೇಹಿತ ರಾಷ್ಟ್ರ. ಚೆನ್ನೈಯಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ನೆರವು ನೀಡುತ್ತಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಡಿಶಾದಲ್ಲಿ ಲಘು ಭೂಕಂಪನ