Webdunia - Bharat's app for daily news and videos

Install App

Banana Art: 52 ಕೋಟಿ ಕೊಟ್ಟು ಖರೀದಿಸಿದ್ದ ಬಾಳೆಹಣ್ಣನ್ನು ಈತ ಮಾಡಿದ್ದೇನು ವಿಡಿಯೋ ನೋಡಿ

Krishnaveni K
ಶನಿವಾರ, 30 ನವೆಂಬರ್ 2024 (14:57 IST)
Photo Credit: X
ನವದೆಹಲಿ: ಇತ್ತೀಚೆಗೆ ಗೋಡೆಗೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು 52 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಆ ಬಾಳೆಹಣ್ಣನ್ನು ಖರೀದಿ ಮಾಡಿದಾತ ಏನು ಮಾಡಿದ್ದಾನೆ ಎನ್ನುವ  ವಿಡಿಯೋ  ವೈರಲ್ ಆಗಿದೆ.

ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಎಂಬಾತ ಗೋಡೆಗೆ ಅಂಟಿಸಿದ್ದ ಬಾಳೆಹಣ್ಣನ್ನು 6.2 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 52 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದ. ಗೋಡೆಗೆ ಅಂಟಿಸಿದ್ದ ಬಾಳೆಹಣ್ಣಿಗೆ ಈ ಪಾಟಿ ಬೆಲೆಯಾ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು.

ಆದರೆ ಕೆಲವರಿಗೆ ಕಲಾಕೃತಿಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸುವ ಹುಚ್ಚು. ಅದೇ ರೀತಿ ಈ ವ್ಯಕ್ತಿಯೂ ಬಾಳೆಹಣ್ಣಿನ ಈ ಕಲಾಕೃತಿಗೆ ಮಾರು ಹೋಗಿ 52 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಬಳಿಕ ಎಲ್ಲರೂ ಅವರಿಗೆ ಬಾಳೆಹಣ್ಣನ್ನು ಏನು ಮಾಡಿದಿರಿ ಎಂದು ಕೇಳುತ್ತಲೇ ಇದ್ದರಂತೆ. ಅವರಿಗಾಗಿ ವಿಡಿಯೋ ಹಾಕಿ ಉತ್ತರ ಕೊಟ್ಟಿದ್ದಾರೆ.

ತಾವು ಹರಾಜಿನಲ್ಲಿ ಖರೀದಿ ಮಾಡಿದ 52 ಕೋಟಿ ರೂ.ಗಳ ಬಾಳೆಹಣ್ಣನ್ನು ಕೂಡಲೇ ತಿಂದಿದ್ದು, ಬಳಿಕ ಈ ಬಾಳೆಹಣ್ಣಿನ ರುಚಿ ಡಿಫರೆಂಟ್ ಆಗಿತ್ತು. 100 ವರ್ಷಗಳ ಹಿಂದಿನ ಬಾಳೆಹಣ್ಣು ಯಾವ ರೀತಿ ಟೇಸ್ಟಿಯಾಗಿದ್ದಿರಬಹುದು ಅದೇ ರೀತಿ ಇತ್ತು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಕೂಡಾ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments