ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಅಲ್ಪ ಕದನ ವಿರಾಮ ನೀಡಲಾಗಿದೆ ಎಂದ ಮಾತ್ರಕ್ಕೆ ಆಪರೇಷನ್ ಸಿಂಧೂರ್ ಮುಕ್ತಾಯವಾಗಿದೆ ಎಂದಲ್ಲ. ಆಪರೇಷನ್ ಸಿಂಧೂರ್ ಇನ್ನೂ ಜಾರಿಯಲ್ಲಿದೆ ಎಂದು ಐಎಎಫ್ ಮಹತ್ವದ ಹೇಳಿಕೆ ನೀಡಿದೆ.
ಆಪರೇಷನ್ ಸಿಂಧೂರ್ ಇನ್ನೂ ಮುಂದುವರಿದಿದೆ. ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ ಹಂಚಿಕೊಳ್ಳಲಿದ್ದೇವೆ ಎಂದು ಇಂದು ಐಎಎಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಇದುವರೆಗೆ ಸೇನೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ. ಈಗಲೂ ಕಾರ್ಯಾಚರಣೆ ನಿಂತಿಲ್ಲ. ಹೀಗಾಗಿ ಸಂಪೂರ್ಣ ಮಾಹಿತಿ ಈಗಲೇ ನೀಡಲಾಗದು ಎಂದು ಸೇನೆ ಮಾಹಿತಿ ನೀಡಿದೆ.
ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಆಪರೇಷನ್ ಸಿಂಧೂರ್ ಗೆ ಎಳ್ಳು ನೀರು ಬಿಡಲಾಯಿತೇ ಎಂದು ಜನ ಸಂಶಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಸೇನೆಯಿಂದ ಮಹತ್ವದ ಹೇಳಿಕೆ ಬಿಡುಗಡೆ ಮಾಡಲಾಗಿದೆ.