Select Your Language

Notifications

webdunia
webdunia
webdunia
webdunia

ಭಾರತ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ - ಡೊನಾಲ್ಡ್ ಟ್ರಂಪ್

ಭಾರತ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ - ಡೊನಾಲ್ಡ್ ಟ್ರಂಪ್
ಅಮೇರಿಕಾ , ಮಂಗಳವಾರ, 12 ಜೂನ್ 2018 (12:34 IST)
ಅಮೇರಿಕಾ : ಭಾರತ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ  ಉತ್ಪನ್ನಗಳ ಮೇಲೆ ಅಧಿಕ ಸುಂಕ ಹೇರುತ್ತಿದೆ. ಇದು ಹೀಗೆ ಮುಂದುವರಿದರೆ ನಾವು ಭಾರತದೊಂದಿಗೆ ವಾಣಿಜ್ಯ ವ್ಯವಹಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.


ಕ್ಯೂಬೆಕ್‌ನಲ್ಲಿ ನಡೆದ ಎರಡು ದಿನಗಳ ಜಿ7 ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು,’ ಜಗತ್ತಿನ ಹಲವು ದೇಶಗಳು ಅಮೆರಿಕವನ್ನು ದೋಚುತ್ತಿವೆ. ಇದು ಜಿ7 ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಭಾರತವೂ ಇದೆ. ಅಲ್ಲಿ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ. ಆದರೆ ನಾವು ಯಾವುದೇ ಸುಂಕ ವಿಧಿಸುತ್ತಿಲ್ಲ. ನಮಗೆ ಹಾಗೆ ಮಾಡಲು ಆಗುವುದಿಲ್ಲ. ನಾವು ಪ್ರತಿಯೊಬ್ಬರೂ ದೋಚುವ ಪಿಗ್ಗಿ ಬ್ಯಾಂಕ್ ಆಗಿದ್ದೇವೆ. ಹಾಗೆ ಮಾಡಬಾರದು. ನಾವು ಹಲವು ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಇನ್ನು ಅದು ನಿಲ್ಲಲಿದೆ. ಅಥವಾ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಇದೇ ಅದಕ್ಕೆ ಸರಿಯಾದ ಉತ್ತರ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ವೇತನ ಹೆಚ್ಚಳ ಬಗ್ಗೆ ಪರಿಶೀಲಿಸುತ್ತೇನೆ: ಡಿಸಿಎಂ ಪರಮೇಶ್ವರ್