Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಗೆ ಶಾಕ್ ಕೊಟ್ಟ ಭಾರತ ಎ ತಂಡ

ಸಂಜು ಸ್ಯಾಮ್ಸನ್
ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪೈಕಿ ಪೈಪೋಟಿ ನಡೆಸುತ್ತಿದ್ದ ಸಂಜು ಸ್ಯಾಮ್ಸನ್ ಗೆ ಭಾರತ ಎ ತಂಡ ಶಾಕ್ ಕೊಟ್ಟಿದೆ.

ಯೋ ಯೋ ಫಿಟ್ ನೆಸ್ ಟೆಸ್ಟ್ ನಲ್ಲಿ ನಪಾಸಾಗಿರುವ ಕೇರಳ ಮೂಲದ ಹೊಡೆ ಬಡಿಯ ಆಟಗಾರ ಸಂಜು ಸ್ಯಾಮ್ಸನ್ ಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡದಿಂದ ಕೊಕ್ ನೀಡಲಾಗಿದೆ.

ಟೀಂ ಇಂಡಿಯಾ ಇಂಗ್ಲೆಂಡ್ ಸರಣಿಗೆ ಮೊದಲು ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಎ ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಗೆ ಪ್ರವಾಸ ಕೈಗೊಂಡಿದೆ. ಆದರೆ ಯೋ ಯೋ ಟೆಸ್ಟ್ ನಲ್ಲಿ ಫೇಲಾಗಿರುವ ಕಾರಣಕ್ಕೆ ಸಂಜು ಸ್ಯಾಮ್ಸನ್ ರನ್ನು ಇಂಗ್ಲೆಂಡ್ ಗೆ ಕಳುಹಿಸಲಾಗಿಲ್ಲ.  ಅವರ ಸ್ಥಾನಕ್ಕೆ ಬದಲಿ ಆಟಗಾರನ ಘೋಷಣೆಯಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ಅನುಷ್ಕಾ ನಡುವೆ ಮೂರನೆಯವರು ಬಂದಾಯ್ತು!